` ಆ ಉದ್ಭವಕ್ಕೆ 11.. ಮತ್ತೆ ಉದ್ಭವಕ್ಕೆ 6..  ಏನಿದು ಗುಟ್ಟು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
matte udbhava specialities
Matte Udbhava Movie Image

1990ರಲ್ಲಿ ತೆರೆಗೆ ಬಂದಿದ್ದ ಉದ್ಭವ, ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು. ಅನಂತ್ನಾಗ್ ನಾಯಕನಾಗಿ ನಟಿಸಿದ್ದ ಉದ್ಭವಕ್ಕೆ ಕೋಡ್ಲು ರಾಮಕೃಷ್ಣ ನಿರ್ದೇಶಕರಾಗಿದ್ದರು. ಅದೇ ಚಿತ್ರದ ಸೀಕ್ವೆಲ್ ಮತ್ತೆ ಉದ್ಭವ. ಒನ್ಸ್ ಎಗೇಯ್ನ್ ಕೋಡ್ಲು ಅವರೇ ನಿರ್ದೇಶಕ.  ಆದರೆ, ಸಿನಿಮಾ ಮಾತ್ರ ಈಗಿನ ಕಾಲಘಟ್ಟದ್ದು.

ಇನ್ನೂ ಒಂದು ವಿಶೇಷವಿದೆ. 1990ರ ಉದ್ಭವ ಚಿತ್ರಕ್ಕೆ 11 ನಿರ್ಮಾಪಕರಿದ್ದರಂತೆ. ಈಗ ಮತ್ತೆ ಉದ್ಭವ ಚಿತ್ರಕ್ಕೆ 6 ಮಂದಿ ನಿರ್ಮಾಪಕರು. ನಿತ್ಯಾನಂದ ಭಟ್, ಸತ್ಯ, ಮಹೇಶ್, ರಾಜೇಶ್ ಮತ್ತಿತರರು ಬಂಡವಾಳ ಹೂಡಿದ್ದು, ಗುರುಪ್ರಸಾದ್ ಮುದ್ರಾಡಿ ಕಾರ್ಯಕಾರಿ ನಿರ್ವಪಕರಾಗಿದ್ದಾರೆ.

ಇದು ಪ್ರಯೋಗಾತ್ಮಕ ಚಿತ್ರವಲ್ಲ, ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ಎನ್ನುವ ಕೋಡ್ಲು, ಆ ಉದ್ಭವಕ್ಕಿಂತ 4 ಪಟ್ಟು ಚೆನ್ನಾಗಿ ಮತ್ತೆ ಉದ್ಭವ ಮೂಡಿ ಬಂದಿದೆ ಅನ್ನೋ ಕಾನ್ಫಿಡೆನ್ಸಿನಲ್ಲಿದ್ದಾರೆ.

ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ನಾಯಕನಾಗಿ ಪ್ರಮೋದ್ ನಟಿಸಿದ್ದು, ಅನಂತ್ ನಾಗ್ ನಟಿಸಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ರಂಗಾಯಣ ರಘು. ನಾಯಕಿಯಾಗಿ ನಟಿಸಿರುವ ಮಿಲನ ನಾಗರಾಜ್ಗೆ ಅಭಿನಯಕ್ಕೆ ಅದ್ಭುತ ಅವಕಾಶ ಸಿಕ್ಕಿರುವ ಖುಷಿಯಿದೆ. ಈ ಎಲ್ಲ ಖುಷಿಯೂ ತೆರೆಯ ಮೇಲೆ ಬರುವ ಸಮಯವೂ ಸನ್ನಿಹಿತವಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery