ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಶೂಟಿಂಗ್ ವೇಳೆ ಅಗ್ನಿ ಅನಾಹುತ ಸಂಭವಿಸಿದೆ. ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಸಂಭವಿಸಿರೋ ದುರಂತದಲ್ಲಿ ಇಡೀ ಸೆಟ್ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.
ಇಡೀ ಸೆಟ್ಟಿನಲ್ಲಿ ನೆಲಕ್ಕೆ ಗೋಣಿಚೀಲ ಬಳಸಿದ್ದೆವು. ಇದರಿಂದಾಗಿ ಬೆಂಕಿ ಹಬ್ಬಲು ಸಾಧ್ಯವಾಗಲಿಲ್ಲ. ಸೆಟ್ಟಿನಲ್ಲಿ ತಂತ್ರಜ್ಞರು ಹಾಗೂ ಸುಮಾರು 200 ಜ್ಯೂನಿಯರ್ ಆರ್ಟಿಸ್ಟುಗಳ ಜೊತೆ 20 ಕಲಾವಿದರಿದ್ದೆವು. ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ತಿಳಿಸಿದ್ದಾರೆ ಶಿವಣ್ಣ.
ಶಿವಣ್ಣ ಕ್ಯಾರವಾನ್‍ನಲ್ಲಿದ್ದರು. ಅವರು ಸುರಕ್ಷಿತರಾಗಿದ್ದಾರೆ. ಸುಮಾರು 1 ಕೋಟಿ ಬೆಲೆ ಬಾಳುವ ಸೆಟ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹರ್ಷ ನಿರ್ದೇಶನದ ಭಜರಂಗಿ 2ಗೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು.
ಆಂಜನೇಯನೇ ನಮ್ಮನ್ನು ಕಾಪಾಡಿದ್ದಾನೆ ಎಂದು ಭಜರಂಗಿಗೇ ಧನ್ಯವಾದ ಅರ್ಪಿಸಿದ್ದಾರೆ ಶಿವರಾಜ್‍ಕುಮಾರ್.