ಜಯಮ್ಮನ ಮಗ, ದುನಿಯಾ ವಿಜಯ್ ಅಭಿನಯದ ಚಿತ್ರ ಬಾಕ್ಸಾಫೀಸ್ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಆ ಚಿತ್ರದ ನಿರ್ದೇಶಕ ವಿಕಾಸ್, ಈಗ ಹೀರೋ ಆಗಿದ್ದಾರೆ. ಚಿತ್ರದ ಹೆಸರು ಕಾಣದಂತೆ ಮಾಯವಾದನು.
ಅಫ್ಕೋರ್ಸ್.. ಕಾಣದಂತೆ ಮಾಯವಾದನು ಎಂಬ ಸಾಲು ಕೇಳಿದ ಕೂಡಲೇ ನೆನಪಾಗೊದು ಪುನೀತ್ ರಾಜ್ಕುಮಾರ್. ಬಾಲನಟನಾಗಿದ್ದಾಗ ಚಲಿಸುವ ಮೋಡಗಳು ಚಿತ್ರದಲ್ಲಿ ಹಾಡಿದ್ದ ಹಾಡು, ಇವತ್ತಿಗೂ ಹಾರ್ಟ್ ಫೇವರಿಟ್. ವಿಶೇಷ ಅಂದ್ರೆ, ತಮ್ಮ ಹಿಟ್ ಹಾಡಿನ ಸಾಲನ್ನೇ ಟೈಟಲ್ ಆಗಿಟ್ಟುಕೊಂಡಿರುವ ಚಿತ್ರದಲ್ಲಿ ಪುನೀತ್ ಒಂದು ಹಾಡನ್ನೂ ಹಾಡಿದ್ದಾರೆ.
ವಿಕಾಸ್ ಎದುರು ಈ ಚಿತ್ರದಲ್ಲಿ ಸಿಂಧು ಲೋಕನಾಥ್ ಹೀರೋಯಿನ್. ರಾಜ್ ಪಾಥಿಪಾಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾಗೆ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಮತ್ತು ಪುಷ್ಪಾ ಸೋಮ್ ಸಿಂಗ್ ನಿರ್ಮಾಪಕರು.