` ರವಿ ಬೋಪಣ್ಣ ಕೊಟ್ಟ ಸಂಕ್ರಾಂತಿ ಥ್ರಿಲ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravi bopanna teaser thrills
Ravi Bopanna

ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನದ ಚಿತ್ರ. ಅವರೇ ನಾಯಕ. ಅವರ ಜೊತೆಗೆ ಚಿತ್ರದಲ್ಲಿ ಕಿಚ್ಚ ಸುದೀಪ್, ರಚಿತಾ ರಾಮ್ ಅತಿಥಿ ಪಾತ್ರಗಳಲ್ಲಿದ್ದರೆ, ಕಾವ್ಯಾ ಶೆಟ್ಟಿ, ಸಂಚಿತಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಟೀಸರ್ ಹೊರಬಿದ್ದಿದ್ದು, ಕುತೂಹಲ ಹುಟ್ಟಿಸಿದೆ. ಅದರಲ್ಲೂ ರವಿಚಂದ್ರನ್ ಲುಕ್ಕು.

ಮುಖದ ತುಂಬಾ ಗಡ್ಡ, ಹುರಿಗಟ್ಟಿದ ಮೀಸೆಯಲ್ಲಿ ಶಾಕ್ ಕೊಡೋ ರವಿಚಂದ್ರನ್, ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿಟೈರ್ಡ್ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಯಾಗಿ. ಶಂಕರ್ ಅಜಿತ್ ನಿರ್ಮಾಣದ ರವಿ ಬೋಪಣ್ಣ ಚಿತ್ರದಲ್ಲಿ ರವಿಚಂದ್ರನ್ ಮತ್ತೊಮ್ಮೆ ನಾನಾ ಅವತಾರ ಎತ್ತಿದ್ದಾರೆ.

ಈ ಚಿತ್ರಕ್ಕೆ ಅವರೇ ಹೀರೋ, ಅವರೇ ಡೈರೆಕ್ಟರ್. ಸಾಹಿತ್ಯವೂ ಅವರದ್ದೇ.. ಸಂಗೀತವೂ ಅವರದ್ದೇ.. ಎಡಿಟಿಂಗ್ ಹೊಣೆಯನ್ನೂ ಸ್ವತಃ ರವಿಚಂದ್ರನ್ ಹೊತ್ತುಕೊಂಡಿದ್ದಾರೆ. ಒಟ್ಟಿನಲ್ಲಿ ಅವರದ್ದು ಪಂಚಾವತಾರ. 

Matthe Udbhava Trailer Launch Gallery

Maya Bazaar Pressmeet Gallery