ಕನ್ನಡದ ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರು ಶೈಲೇಂದ್ರ ಬಾಬು. ಅವರ ಪುತ್ರ ಸುಮಂತ್, ದಿಲ್‍ವಾಲಾ, ತಿರುಪತಿ ಎಕ್ಸ್‍ಪ್ರೆಸ್ ಹಾಗೂ ತೆಲುಗಿನಲ್ಲಿ ಲೀ ಸಿನಿಮಾ ಮಾಡಿದ್ದರು. ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಸುಮಂತ್ ಜೊತೆ ಭಾವನಾ ಮೆನನ್, ಕವಿತಾ ಗೌಡ ನಾಯಕಿಯರು. ವಿಶೇಷವೆಂದರೆ, ಈ ಚಿತ್ರಕ್ಕೆ ರವಿ ಗರಣಿ ನಿರ್ಮಾಪಕ.
ಚಿತ್ರದ ಹೆಸರು ಗೋವಿಂದಾ ಗೋವಿಂದಾ. ಕಂಪ್ಲೀಟ್ ಕಾಮಿಡಿ ಸಿನಿಮಾ. ಈಗಾಗಲೇ 45 ದಿನಗಳ ಶೂಟಿಂಗ್ ಮುಗಿದಿದ್ದು, ಇನ್ನೂ 15 ದಿನ ಶೂಟಿಂಗ್ ಬ್ಯಾಲೆನ್ಸ್ ಇದೆ. ಚಿತ್ರದ ಐಟಂ ಸಾಂಗ್‍ಗೆ ಬಾಲಿವುಡ್‍ನ ನೋರಾ ಫತೇಹಿ ಬರುತ್ತಿದ್ದು, ಸಿನಿಮಾ ತಂಡ ಖುಷಿಯಲ್ಲಿದೆ.