` ಮದುವೆಗೆ ಮುನ್ನ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ನಿವೇದಿತಾ ಗೌಡ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
Chandan Shetty - Niveditha Gowda Image
Chandan Shetty - Niveditha Gowda

ಗಾಯಕ ಚಂದನ್ ಶೆಟ್ಟಿಯ ಮುದ್ದಿನ ಗೊಂಬೆ ನಿವೇದಿತಾ ಗೌಡ. ದಸರಾ ವೇದಿಕೆಯಲ್ಲಿಯೇ ಪ್ರಪೋಸ್ ಮಾಡಿ ಸಂಚಲನ ಸೃಷ್ಟಿಸಿದ್ದರು ಚಂದನ್ ಶೆಟ್ಟಿ. ಅದು ವಿವಾದವೂ ಆಗಿತ್ತು. ಈಗ ಮದುವೆ ಫಿಕ್ಸ್ ಆಗಿದೆ. ಫೆಬ್ರವರಿ 25, 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ. ಇದರ ನಡುವೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ನಿವೇದಿತಾ ಗೌಡ.

ನಿವೇದಿತಾ ಗೌಡಗೆ ಏರ್‍ಪೋರ್ಟ್‍ನಲ್ಲಿ ಬಿಐಎಎಲ್‍ನಲ್ಲಿ ಕೆಲಸ ಸಿಕ್ಕಿದೆ. ಆಪರೇಷನ್ ಅಸಿಸ್ಟೆಂಟ್ ಆಗಿ. ಡಿಗ್ರಿ ಮುಗಿಸಿದ ಕೂಡಲೇ ಕೆಲಸ ಸಿಕ್ಕಿದ್ದು ಖುಷಿ ಕೊಡ್ತು. ಏರ್‍ಫೋರ್ಸ್‍ನಲ್ಲಿ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕನಸು ಈಡೇರಿದೆ ಎಂದಿದ್ದಾರೆ ನಿವೇದಿತಾ ಗೌಡ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery