ಕೆಜಿಎಫ್ ಚಾಪ್ಟರ್ 1ನಲ್ಲಿ ಹಲವು ಸ್ಪೆಷಾಲಿಟಿಗಳಿದ್ದವು. ಅಂತಹ ಸ್ಪೆಷಾಲಿಟಿಗಳಲ್ಲಿ ಒಂದು ಡೈಲಾಗ್ಸ್. ಗುಂಡು ಹೊಡೆದಂತಿದ್ದ ಸಂಭಾಷಣೆ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈಗ ಕೆಜಿಎಫ್ 2ನಲ್ಲೂ ಅಷ್ಟೆ, ಅಂಥದ್ದೇ ಡೈಲಾಗ್ಸ್ ಇವೆ. ಹುಟ್ಟುಹಬ್ಬದ ವೇಳೆ ಸ್ವತಃ ಯಶ್, ಟೀಸರ್ ಬಿಡದೇ ಇರುವುದಕ್ಕೆ ಕ್ಷಮೆ ಕೋರಿ, ಚಿತ್ರದ ಒಂದೆರಡು ಡೈಲಾಗ್‍ಗಳನ್ನು ಅಭಿಮಾನಿಗಳ ಎದುರು ಹೇಳಿ ಥ್ರಿಲ್ ಕೊಟ್ಟಿದ್ದಾರೆ.
ಏನಂದೇ.. ಒಂದು ಹೆಜ್ಜೆ ಮುಂದೆ ಇಟ್ಟು ಬಂದವ್ನು ಅಂದ್ಕೊಂಡಿದ್ದೀರಾ.. ಗಡಿಯಾರದಲ್ಲಿ ಒಂದು ಹೆಜ್ಜೆ ಮುಂದಿಡೋಕೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದಿಡಬೇಕು. ಆದರೆ, ಚಿಕ್ಕ ಮುಳ್ಳು ಒಂದೇ ಹೆಜ್ಜೆ ಮುಂದಿಟ್ರೆ ಸಾಕು.
ನಾನು ಹೆಜ್ಜೆ ಇಟ್ಟಾಗಿದೆ. ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮುಂದೆ ಈ ಟೆರಟರಿ ನಂದು.. ಆ ಟೆರಟರಿ ನಂದು ಅನ್ನೋದನ್ನೆಲ್ಲ ಬಿಟ್ಟುಬಿಡಿ. ವಲ್ರ್ಡ್ ಇನ್ನು ಮುಂದೆ ನನ್ನ ಟೆರಟರಿ.
ಯಶ್ ಡೈಲಾಗ್ ಹೊಡೆದು ಥ್ರಿಲ್ ಕೊಟ್ಟಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಚಿತ್ರದ ಹೊಸ ಪೋಸ್ಟರ್ ಕೊಟ್ಟು ಥ್ರಿಲ್ ಕೊಟ್ಟಿದ್ದಾರೆ.