ಅದು ಸೂರಿ ಅಣ್ಣಾ ಸಾಂಗು. ಕುಡುಕರ ಗೀತೆ. ಈ ಗೀತೆಗೆ ಸಾಹಿತ್ಯ ದುನಿಯಾ ವಿಜಯ್ ಮತ್ತು ಕಿರಣ್. ಌಂಥೋನಿ ದಾಸನ್ ಹಾಡಿರುವ ಹಾಡು ಸಿಕ್ಕಾಪಟ್ಟೆ ಹಿಟ್ಟಾಗಿದೆ. ಪಕ್ಕಾ ಲೋಕಲ್ ಬೆಂಗಳೂರು ಲಾಂಗ್ವೇಜು. ಸಂಗೀತ ನಿರ್ದೇಶಕ ಚರಣ್ ರಾಜ್ ಅವರೇ ಆದರೂ, ಹಾಡನ್ನು ಕಂಪೋಸ್ ಮಾಡಿರುವವರ ಟೈಟಲ್ ಕಾರ್ಡಿನಲ್ಲಿ ನವೀನ್ ಸಜ್ಜು ಹೆಸರೂ ಇದೆ.
ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಸಲಗ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿರುವ ಚಿತ್ರವಿದು. 10 ಜನ ನಿರ್ದೇಶಕರು, 10 ಜನ ನಿರ್ಮಾಪಕರು ಒಟ್ಟಿಗೇ ಹಾಜರಿದ್ದು ಸಲಗ ಆಡಿಯೋ ರಿಲೀಸ್ಗೆ ಶುಭ ಕೋರಿದರು. ಪ್ರಮುಖ ಆಕರ್ಷಣೆಯಾಗಿದ್ದವರು ಶಿವರಾಜ್ ಕುಮಾರ್ ಮತ್ತು ನಿವೃತ್ತ ಡಿಜಿಪಿ ಓಂಪ್ರಕಾಶ್.
ಟಗರು ಚಿತ್ರವೂ ಒಂದೇ.. ಸಲಗ ಚಿತ್ರವೂ ಒಂದೇ. ಈ ಚಿತ್ರಕ್ಕೆ ಪ್ರೇಕ್ಷಕರ ಆಶೀರ್ವಾದವಿರಲಿ ಎಂದು ಹಾರೈಸಿದ ಶಿವಣ್ಣ, ಚರಣ್ ಸಂಗೀತಕ್ಕೆ ನಾನು ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು.