ಭಜರಂಗಿ 2 ಚಿತ್ರದ ಒಂದೊಂದೇ ಕಥೆ ಹೊರಬರುತ್ತಿವೆ. ಈಗ ಹೊರಬಿದ್ದಿರುವುದು ಭಾವನಾ ಲುಕ್ಕು. ಭಜರಂಗಿ 2 ಚಿತ್ರದಲ್ಲಿ ಭಾವನಾ ಬುಡಕಟ್ಟು ಯುವತಿಯಾಗಿ ನಟಿಸಿದ್ದಾರಂತೆ. ಹಣೆ ತುಂಬಾ ಕುಂಕುಮ, ಕೊರಳಲ್ಲಿ ತಾಯಕ, ಕೆದರಿದ ಕೂದಲಿನ ಭಾವನಾ ಲುಕ್ ಬೆರಗು ಹುಟ್ಟಿಸುತ್ತಿದೆ.
ಚಿತ್ರದಲ್ಲಿ ಭಾವನಾ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಹರ್ಷ ನಿರ್ದೇಶನದ ಚಿತ್ರದಲ್ಲಿ ಶಿವಣ್ಣಗೆ ಭಾವನಾ ಜೋಡಿ. ಟಗರು ನಂತರ ಶಿವಣ್ಣ ಮತ್ತು ಭಾವನಾ ಮತ್ತೆ ಒಟ್ಟಿಗೇ ನಟಿಸಿದ್ದಾರೆ. ಸದ್ಯಕ್ಕೆ ಭಜರಂಗಿ 2 ಚಿತ್ರೀಕರಣ ಸಕ್ರೆಬೈಲಿನಲ್ಲಿ ನಡೆಯುತ್ತಿದೆ.