ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರೀಕ್ಷೆಯಂತೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ ಪ್ರಶಾಂತ್ ನೀಲ್.
ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಯಶ್ ಬರ್ತ್‍ಡೇಗೆ ಒಂದು ಟೀಸರ್ ಆದರೂ ಪಕ್ಕಾ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಪ್ರಶಾಂತ್ ಕೊಡುತ್ತಿರುವ ಕಾರಣ ಇದು, ಶೂಟಿಂಗ್ ಮುಗಿಸಿಕೊಂಡು ಇಡೀ ತಂಡ ಬೆಂಗಳೂರಿಗೆ ಬರುವುದೇ ಜನವರಿ 7ಕ್ಕೆ. ಉಳಿಯುವುದು ಇನ್ನೊಂದೇ ದಿನ. ಒಂದು ದಿನದಲ್ಲಿ ದಿ ಬೆಸ್ಟ್ ಎನ್ನುವ ಕ್ವಾಲಿಟಿ ಕೊಡಲು ಸಾಧ್ಯವಿಲ್ಲ. ಬೆಸ್ಟ್ ಕೊಡದೇ ಹೋದರೆ ತಪ್ಪಾಗುತ್ತದೆ. ಹೀಗಾಗಿ ಟೀಸರ್ ಬಿಡುಗಡೆಯನ್ನೇ ಮುಂದೂಡಿದ್ದಾರೆ ಪ್ರಶಾಂತ್ ನೀಲ್.
ನಿರ್ದೇಶಕ ಪ್ರಶಾಂತ್ ನೀಲ್ ಕಮಿಟ್‍ಮೆಂಟ್ ಬಗ್ಗೆ ಅವರ ಜೊತೆ ಕೆಲಸ ಮಾಡಿರುವವರಿಗೆ ಚೆನ್ನಾಗಿ ಗೊತ್ತು. ಅಂದುಕೊಂಡಂತೆ ಔಟ್‍ಪುಟ್ ಸಿಗುವವರೆಗೂ ರಾಜಿಯಾಗದ ಸ್ವಭಾವ ಅವರದ್ದು. ಸ್ಸೋ.. ಟೀಸರ್ ವಿಚಾರದಲ್ಲೂ ರಾಜಿ ಮಾಡಿಕೊಳ್ಳುತ್ತಿಲ್ಲ. ಆದರೆ, ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 8 ನಿಮಿಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಸೆಕೆಂಡ್ ಪೋಸ್ಟರ್ ಹೊರಬೀಳಲಿದೆ.