ಡಿಟೆಕ್ಟಿವ್ ದಿವಾಕರ ಖ್ಯಾತಿಯ ರಿಷಬ್ ಶೆಟ್ಟಿ, ಕೌಬಾಯ್ ಕೃಷ್ಣನ ಅವತಾರ ಎತ್ತಲು ಸಿದ್ಧರಾಗಿದ್ದಾರೆ. ಅವನೇ ಶ್ರೀಮನ್ನಾರಾಯಣದಲ್ಲಿ ಸೆಕೆಂಡ್ ಹೀರೋ ಅರ್ಥಾತ್ ಅವರೇ ಹೇಳಿಕೊಂಡಂತೆ ಕೆಲವೇ ಸೆಕೆಂಡು ಬಂದು ಹೋಗುವ ಕೌಬಾಯ್ ಕೃಷ್ಣನಾಗಿ ಗಮನ ಸೆಳೆದಿದ್ದರು ರಿಷಬ್ ಶೆಟ್ಟಿ. ಈಗ ಅದೇ ಹೆಸರನ್ನು ಫಿಲಂ ಚೇಂಬರಿನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.
ರಂಗಿತರಂಗ ಖ್ಯಾತಿಯ ಪ್ರಕಾಶ್ ಕೌಬಾಯ್ ಶೆಟ್ಟಿಗೆ ನಿರ್ಮಾಪಕರಾಗಲಿದ್ದಾರಂತೆ. ಸದ್ಯಕ್ಕೆ ರಿಷಬ್ ರುದ್ರಪ್ರಯಾಗ ಚಿತ್ರದಲ್ಲಿ ಬ್ಯುಸಿ. ಅದಾದ ನಂತರ ಆಂಟೋನಿ ಶೆಟ್ಟಿ ಮತ್ತು ಬೆಲ್ಬಾಟಂ 2 ಚಿತ್ರಗಳಿವೆ. ಮೋಸ್ಟ್ಲೀ.. ಆ ಮೂರೂ ಚಿತ್ರಗಳ ನಂತರ ಕೌಬಾಯ್ ಕೃಷ್ಣ ಸೆಟ್ಟೇರಬಹುದು.