ಹೊಸ ವರ್ಷಕ್ಕೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಜೊತೆ ಸೆಲ್ಫೀ ಫೋಟೋ ಕೊಟ್ಟು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದ ದರ್ಶನ್, ಈಗ ಮಗನ ಜೊತೆ ಮೈಸೂರಿನಲ್ಲಿದ್ದಾರೆ. ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಪ್ರೀತಿ. ಕುದುರೆ ಸವಾರಿ ಎಂದರೆ ಅಚ್ಚುಮೆಚ್ಚು.
ಮಗನನ್ನೂ ಹಾಗೆಯೇ ಬೆಳೆಸುತ್ತಿರುವ ದರ್ಶನ್, ಈಗ ಮಗನಿಗೆ ಕುದುರೆ ಸವಾರಿ ಕಲಿಸುತ್ತಿದ್ದಾರೆ. ತಾವೊಂದು ಕುದುರೆ ಹತ್ತಿಕೊಂಡು, ಚಿಕ್ಕ ಕುದುರೆ ಮೇಲೆ ಮಗನನ್ನು ಕೂರಿಸಿಕೊಂಡು ಮಗನಿಗೆ ಕುದುರೆ ಸವಾರಿ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ ದರ್ಶನ್. ತಂದೆಗೆ ತಕ್ಕ ಮಗ ಎಂಬಂತೆ ವಿನೀಶ್ ಕೂಡಾ ಉತ್ಸಾಹದಿಂದ ಕುದುರೆ ಸವಾರಿ ಕಲಿಯುತ್ತಿದ್ದಾರೆ.