` ಅಭಿಮಾನಿಗಳಿಗೆ ದರ್ಶನ್ ಹೊಸ ವರ್ಷದ ಬೋನಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's new yea bonus to his fans
Roberrt Movie Poster

ರಾಬರ್ಟ್ ಚಿತ್ರದ ಒಂದು ಲುಕ್ಕು, ಪೋಸ್ಟರಿಗಾಗಿ ಚಾತಕ ಪಕ್ಷಿಗಳಂತೆ ಕಾದಿದ್ದ ದರ್ಶನ್ ಅಭಿಮಾನಿಗಳಿಗೆ, ರಾಬರ್ಟ್ ಚಿತ್ರತಂಡ ಅನಿರೀಕ್ಷಿತ ಬೋನಸ್ ನೀಡಿದೆ. ಕ್ರಿಸ್‍ಮಸ್ ದಿನ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದ ರಾಬರ್ಟ್ ಟೀಂ, ಈಗ ಹೊಸ ಪೋಸ್ಟರ್ ಕೊಟ್ಟಿದೆ. ಇದು ಹೊಸ ವರ್ಷದ ಕೊಡುಗೆ.

ಬಾ.. ಬಾ.. ಬಾ.. ನಾನ್ ರೆಡಿ ಎನ್ನುತ್ತಿರುವ ದರ್ಶನ್ ಅವರ ಲುಕ್ಕು.. ಬಾ ಬಾ ಬಾ ಎನ್ನುತ್ತಿರುವುದು 2020ಗೆ. 2019ರಲ್ಲಿ ಒಂದರ ಹಿಂದೊಂದು 3 ಹಿಟ್ ಕೊಟ್ಟ ದರ್ಶನ್, 2020ರಲ್ಲಿ ರಾಬರ್ಟ್ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಉಮಾಪತಿ ನಿರ್ಮಾಣದ ಚಿತ್ರದಲ್ಲಿ ಆಶಾ ಭಟ್, ಸೋನಲ್ ಮೆಂಥರೋ ನಾಯಕಿಯರು.