` ದನಕಾಯೋಳ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
crickter hardik pandya engaged to natasha
Hardik Pandya, Natasha

ಟೀಂ ಇಂಡಿಯಾ ಕ್ರಿಕೆಟ್‍ನ ಯಂಗ್ ಸೆನ್ಸೇಷನ್ ಹಾರ್ದಿಕ್ ಪಾಂಡ್ಯ ವೈವಾಹಿಕ ಜೀವನದತ್ತ ಮೊದಲ ಹೆಜ್ಜೆಯಿಟ್ಟಿದ್ದಾರೆ.ಸರ್ಬಿಯಾದ ಚೆಲುವೆ ಮಾಡೆಲ್ ನಟಿ ನತಾಶಾ ಸ್ಯಾಂಕೊವಿಕ್ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಕೇಳಿಬರುತ್ತಿದ್ದ ಪ್ಲೇಬಾಯ್ ಗಾಸಿಪ್ಪುಗಳು, ರೂಮರುಗಳಿಗೆಲ್ಲ ಫುಲ್ ಸ್ಟಾಪ್ ಇಟ್ಟಿದ್ದಾರೆ ಹಾರ್ದಿಕ್ ಪಾಂಡ್ಯ.

ವಿಶೇಷವೇನೆಂದರೆ, ಸರ್ಬಿಯಾದ ಈ ಮಾಡೆಲ್ ಕನ್ನಡದ ದನಕಾಯೋನು ಚಿತ್ರದಲ್ಲಿ ನಟಿಸಿದ್ದರು. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ನತಾಶಾ, ವರದಿಗಾರ್ತಿಯಾಗಿ ಕಾಣಿಸಿಕೊಂಡಿದ್ದರು.