` ಒಂಟೆ ಮೇಲೆ ತ್ರಿವಿಕ್ರಮ ಫೈಟಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
camel fight sequence in trivikrama
Trivikrama Shooting Image

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ಅಭಿನಯದ ಮೊದಲ ಚಿತ್ರ ತ್ರಿವಿಕ್ರಮ ಹೊಸ ದಾಖಲೆ ಬರೆದಿದೆ. ರಾಜಸ್ಥಾನದಲ್ಲಿ ಚಿತ್ರೀಕರಣಗೊಂಡಿರುವ ತ್ರಿವಿಕ್ರಮ ಚಿತ್ರಕ್ಕೆ ಮರಳುಗಾಡಿನಲ್ಲಿ ವಿಭಿನ್ನ ಫೈಟಿಂಗ್ ನಡೆಸಲಾಗಿದೆ. ಒಂಟೆಗಳ ಮೇಲೆ ಫೈಟಿಂಗ್ ಮಾಡುವ ಸಾಹಸ ದೃಶ್ಯ ಚಿತ್ರೀಕರಿಸಲಾಗಿದೆ.

ಒಂಟೆಗಳ ಮೇಲೆ ಚೇಸಿಂಗ್, ಫೈಟಿಂಗ್ ಮಾಡುವುದು ಕನ್ನಡದಲ್ಲಿ ಇದೇ ಪ್ರಥಮ. ಸೈರಾ, ದಬಾಂಗ್, ಬಾಡಿಗಾರ್ಡ್ ಚಿತ್ರಗಳ ಸ್ಟಂಟ್ ಮಾಸ್ಟರ್ ವಿಜಿ, ಸಾಹಸ ದೃಶ್ಯಗಳನ್ನು ಸಂಯೋಜಸಿದ್ದಾರೆ. ವಿಕ್ರಂ ಜೊತೆ ಆಕಾಂಕ್ಷಾ ಶರ್ಮ, ಸಾಧುಕೋಕಿಲ, ರೋಹಿತ್ ರಾಯ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಗೌರಿ ಎಂಟರ್‍ಟೈನರ್ಸ್ ಬ್ಯಾನರ್‍ನಲ್ಲಿ ಸೋಮಣ್ಣ ನಿರ್ಮಿಸುತ್ತಿರುವ ಚಿತ್ರವಿದು. ಸಹನಾ ಮೂರ್ತಿ ನಿರ್ದೇಶನದ ಚಿತ್ರ ವಿಕ್ರಂ ರವಿಚಂದ್ರನ್‍ರ ಮೊತ್ತ ಮೊದಲ ಸಿನಿಮಾ.