2011ರ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರವೀಣ್ ಕುಮಾರ್ (ರಾಮಕೃಷ್ಣ ಡಿ.ಕೆ.) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ರಾಮಕೃಷ್ಣ ಅವರು 135 ಮತಗಳನ್ನು ಪಡೆದು ಅಧ್ಯಕ್ಷರಾಗಿ ಗೆದ್ದರೆ, ಎಂ.ಜಿ.ರಾಮಮೂರ್ತಿ117 ಮತ ಪಡದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಚುನಾವಣೆಗೆ ಒಂದು ದಿನ ಮೊದಲು ನಿರ್ಮಾಪಕ ಮುನಿರತ್ನ ಕಣದಿಂದ ಹಿಂದೆ ಸರಿದಿದ್ದರು. ಹೀಗಿದ್ದರೂ ಅವರಿಗೆ ಚುನಾವಣೆಯಲ್ಲಿ 5 ವೋಟು ಬಿದ್ದಿವೆ.
ಕಾರ್ಯದರ್ಶಿಯಾಗಿ ಕೆ.ಮಂಜು, ಜಂಟಿ ಕಾರ್ಯದರ್ಶಿಯಾಗಿ ರಮೇಶ್ ಬಾಬು (ಅವಿರೋಧ ಆಯ್ಕೆ) ಖಜಾಂಚಿಯಾಗಿ ಆರ್.ಎಸ್.ಗೌಡ (ಅವಿರೋಧ ಆಯ್ಕೆ) ಸಂಘದ ಹೊಣೆ ಹೊತ್ತಿದ್ದಾರೆ.
ಕಾರ್ಯಕಾರಿ ಸಮಿತಿಗೆ ಭಾ.ಮಾ.ಹರೀಶ್, ಎನ್.ಎಂ.ಸುರೇಶ್, ಎ.ಗಣೇಶ್, ಉಮೇಶ್ ಬಣಕಾರ್, ಸುಬ್ರಮಣಿ(ಕರಿ ಸುಬ್ಬು), ಜೆ.ಜೆ.ಕೃಷ್ಣ, ಪ್ರಮೀಳಾ ಜೋಷಾಯ್, ಜೆ.ನಂದಿಹಾಳ್, ಎ. ನರಸಿಂಹ, ಅಂಚೆಹಳ್ಳಿ ಶಿವಕುಮಾರ್, ಸುಂದರ್ ರಾಜ್ ಆಯ್ಕೆಯಾಗಿದ್ದಾರೆ.