` ನ್ಯೂ ಇಯರ್ ಪಾರ್ಟಿ ಕುಡುಕರಿಗೆ ಯಶ್ ಕೊಟ್ಟ ಐಡಿಯಾ ಮತ್ತು ಎಚ್ಚರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash's messgae for new year party
Yash

ಕುಡಿಯಬೇಡಿ. ಅದು ಮೊದಲನೇ ಸಲಹೆ. ಅಕಸ್ಮಾತ್ ಕುಡಿದರೂ.. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಬೇಡಿ. ಈ ಬಾರಿಯ ಹೊಸ ವರ್ಷಾಚರಣೆ ಸಂಭ್ರಮದಲ್ಲಿರುವವರಿಗೆ ಪೊಲೀಸರು ಯಶ್ ಮೂಲಕ ಈ ಬುದ್ದಿವಾದ ಹೇಳಿಸಿದ್ದಾರೆ. ಹೊಸ ವರ್ಷ ಪಾರ್ಟಿ, ಮೋಜು, ಮಸ್ತಿ ಎಂದು ಕುಣಿದು ಕುಡಿದು ಕುಪ್ಪಳಿಸಿ ಮನೆಗೆ ಹೋಗುವಾಗ ಎಚ್ಚರಿಕೆಯಿರಲಿ ಎಂದು ಯಶ್ ಅವರಿಂದ ಜಾಗೃತಿ ವಿಡಿಯೋ ಮಾಡಿಸಿದ್ದಾರೆ.

ಯಶ್ ಹೇಳಿರುವುದು ಇಷ್ಟೆ..ಒಂದು ದಿನದ ಪಾರ್ಟಿ, ಫ್ರೆಂಡ್ಸ್ ಜೊತೆ ಖುಷಿಯಾಗಿರುವ ಜೋಶ್‍ನಲ್ಲಿ ಮೈಮರೆತು ಗಾಡಿ ಓಡಿಸಿದರೆ, ಅನಾಹುತ ತಪ್ಪಿದ್ದಲ್ಲ. ನಿಮ್ಮನ್ನು ನಂಬಿಕೊಂಡು ನಿಮ್ಮನ್ನು ಪ್ರೀತಿಸುವ ಜೀವಗಳು ಇವೆ ಎನ್ನುವುದು ನೆನಪಿನಲ್ಲಿರಲಿ. ಹೊಸತನ ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಎಚ್ಚರ ತಪ್ಪಬೇಡಿ. ಸ್ಸೋ.. ಹಾಗಾದರೆ.. ನಾವೇನು ಮಾಡಬೇಕು. ಪರಿಹಾರವೂ ಇದೆ.

ಸಾರ್ವಜನಿಕ ಸಾರಿಗೆ ಬಳಸಿ. ಅಥವಾ ಕ್ಯಾಬ್, ಆಟೋಗಳನ್ನು ಬಳಸಿ. ಕುಡಿಯದೇ ಇರುವ ಗೆಳೆಯರ ಕೈಲಿ ಗಾಡಿ ಓಡಿಸಿ. ದಯವಿಟ್ಟು ರಸ್ತೆ ಸುರಕ್ಷತೆಗಾಗಿ ಪೊಲೀಸರ ಜೊತೆ ಕೈಜೋಡಿಸಿ. ಹ್ಯಾಪಿ ನ್ಯೂ ಇಯರ್..ಬಿ ಸೇಫ್.

Shivarjun Movie Gallery

KFCC 75Years Celebrations and Logo Launch Gallery