ಒಂದು ಮೊಟ್ಟೆಯ ಕಥೆ ಅನ್ನೋ ವಿಶಿಷ್ಟ ಸಿನಿಮಾದಿಂದ ಚಿತ್ರರಂಗಕ್ಕೆ ಪರಿಚಯವಾದ ರಾಜ್ ಬಿ.ಶೆಟ್ಟಿ, ನಂತರ ಹಲವು ಚಿತ್ರಗಳಲ್ಲಿ ನಟಿಸಿದರು ಕೂಡಾ. ಸದ್ಯಕ್ಕೆ ಪುನೀತ್ ರಾಜ್‍ಕುಮಾರ್ ಬ್ಯಾನರ್‍ನ ಮಾಯಾಬಜಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ರಾಜ್ ಬಿ.ಶೆಟ್ಟಿ ಮೂಲತಃ ನಿರ್ದೇಶಕ. ಒಂದು ಮೊಟ್ಟೆಯ ಕಥೆ ಚಿತ್ರಕ್ಕೂ ಅವರೇ ನಿರ್ದೇಶಕ. ಈಗ ನಟನೆಗೆ ಬ್ರೇಕ್ ಕೊಟ್ಟಿದ್ದಾರೆ ರಾಜ್ ಬಿ.ಶೆಟ್ಟಿ.
ಮೊಟ್ಟೆ ಸ್ಟಾರ್ ಎಂದೇ ಖ್ಯಾತರಾಗಿದ್ದ ರಾಜ್ ಬಿ.ಶೆಟ್ಟಿ `ನನಗೆ ನಟನೆಗಿಂತ ನಿರ್ದೇಶನವೇ ಇಷ್ಟ. ಹೀಗಾಗಿಯೇ ಹೊಸ ಕಥೆ ಬರೆಯುತ್ತಿದ್ದೇನೆ. ನಟನೆಗೆ ಬ್ರೇಕ್ ಕೊಡುತ್ತಿದ್ದೇನೆ. ನಿರ್ದೇಶಕನಾಗಿರುವುದೇ ಹೆಚ್ಚು ಕಿಕ್ ಕೊಡುತ್ತೆ' ಎಂದಿರುವ ರಾಜ್ ಬಿ.ಶೆಟ್ಟಿ, ಮಂಗಳೂರಿನಲ್ಲಿ ನಡೆಯುವ ಗ್ಯಾಂಗ್‍ಸ್ಟರ್‍ಗಳ ಕಥೆ ಬರೆಯುತ್ತಿದ್ದಾರಂತೆ. ಅಲ್ಲಿಗೆ.. ಮುಂದಿನ ವರ್ಷ ಮತ್ತೊಮ್ಮೆ ರಾಜ್ ಬಿ.ಶೆಟ್ಟಿ ಡೈರೆಕ್ಟರ್ ಆಗಲಿದ್ದಾರೆ ಎಂದಾಯ್ತು