ಪುನೀತ್,ಸಂತೋಷ್ ಆನಂದ ರಾಮ್, ಹೊಂಬಾಳೆ ಬ್ಯಾನರ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಯುವರತ್ನ ರಿಲೀಸ್ ಡೇಟ್ ಯಾವಾಗ..? ಈ ಪ್ರಶ್ನೆಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಯುವರತ್ನ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿವೆ. ಹೀಗಿರುವಾಗಲೇ ಡಿಸೆಂಬರ್ 31ಕ್ಕೆ ಭರ್ಜರಿ ನ್ಯೂಸ್ ಸಿಗಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದಾ..? ಏನಿರಬಹುದು ಡಿ.31ರ ಭರ್ಜರಿ ನ್ಯೂಸ್..? ರಿಲೀಸ್ ಡೇಟ್ ಫಿಕ್ಸ್ ಆಗಿದೆಯಾ ಎಂಬ ಚರ್ಚೆಗಳು ಶುರುವಾಗಿಬಿಟ್ಟಿವೆ.
ಕಾರಣ ಇಷ್ಟೆ, ಪುನೀತ್ ಅಭಿನಯದ ನಟಸಾರ್ವಭೌಮ ರಿಲೀಸ್ ಆಗಿ ಆಗಲೇ 10 ತಿಂಗಳಾಗಿದೆ. ಇನ್ನು ಯುವರತ್ನ ಸೃಷ್ಟಿಸಿರುವ ಕ್ರೇಜೇ ಬೇರೆ. ಎಲ್ಲ ಪ್ಲಾನ್ ಪ್ರಕಾರವೇ ನಡೆದರೆ, 2020ರ ಏಪ್ರಿಲ್ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದಹಾಗೆ ರಾಜಕುಮಾರ ರಿಲೀಸ್ ಆಗಿದ್ದುದು 2017ರ ಮಾರ್ಚ್ 24ರಂದು. ನೋಡೋಣ.. ಕಾಯೋಣ.