` ಕಬ್ಬ ಸೆಟ್ಟಲ್ಲೇ ಸಂಪೂರ್ಣ ಸಿನಿಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kabza movie specialty
Kabza Movie Image

ಒಂದಾನೊಂದು ಕಾಲವಿತ್ತು, ಸ್ಟುಡಿಯೋಗಳಲ್ಲಿ ಸೆಟ್ಟುಗಳಲ್ಲಿಯೇ ಇಡೀ ಚಿತ್ರ ಮುಗಿದುಹೋಗುತ್ತಿತ್ತು. ಅದಾದ ಮೇಲೆ ಹೊರಾಂಗಣ ಬಂತು, ಫಾರಿನ್ ಬಂತು. ಈಗ ಮತ್ತೊಮ್ಮೆ ಹಳೆಯದನ್ನು ನೆನಪಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ ಆರ್.ಚಂದ್ರು ಮತ್ತು ಉಪೇಂದ್ರ ಜೋಡಿ. ಐ ಲವ್ ಯು ನಂತರ ಮತ್ತೆ ಒಟ್ಟಿಗೇ ಸಿನಿಮಾ ಮಾಡುತ್ತಿರುವ ಜೋಡಿಯ ಹೊಸ ಸಿನಿಮಾ ಕಬ್ಜಾ.

ಈ ಚಿತ್ರದಲ್ಲಿ 1947ರಿಂದ 1980ರವರೆಗಿನ ರೌಡಿಸಂ ಕಥೆಯಿದೆ. ಆ ಕಾಲವನ್ನು ಎಲ್ಲಿಂದ ಹುಡುಕಿಕೊಂಡು ಹೋಗೋಣ. ಹಾಗಾಗಿ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಒಂದು ಸೆಟ್, ಬೆಂಗಳೂರಿನ ಮಿನರ್ವ ಹಾಲ್ ಮತ್ತು ದೇವನಹಳ್ಳಿಯಲ್ಲಿ ಸೆಟ್ ಹಾಕಲಾಗಿದೆ. ಚಿತ್ರದ ಪ್ರತಿ ದೃಶ್ಯವೂ ಸೆಟ್‍ನಲ್ಲೇ ಚಿತ್ರೀಕರಣವಾಗಲಿದೆ ಎಂದಿದ್ದಾರೆ ಚಂದ್ರು.

ಜನವರಿ 2ರಂದು ತೆಲುಗಿನಲ್ಲಿ ಕಬ್ಜ ಚಿತ್ರದ ಮುಹೂರ್ತ ನಡೆಯಲಿದ್ದು, ಸಿನಿಮಾ ಒಟ್ಟು 7 ಭಾಷೆಗಳಲ್ಲಿ ನಿರ್ಮಾಣವಾಗಲಿದೆ.