ನರಾಚಿ ಗಣಿ.. ಅಲ್ಲಿರುವ 20 ಸಾವಿರ ಕಾರ್ಮಿಕರಿಗೆ ಶಕ್ತಿ ತುಂಬುವ ರಾಕಿಭಾಯ್, ಗರುಡನನ್ನು ಕೊಂದು ಹಾಕಿದ್ದಾನೆ. ದುಷ್ಟ ಸಂಹಾರವಾಗಿದೆ. ಮುಂದೆ.. ಅವನು ಅಲ್ಲಿ ಹೊಸದೊಂದು ಸಾಮ್ರಾಜ್ಯ ಕಟ್ಟಬೇಕು. ಕಟ್ಟುತ್ತಾನಾ..? ರಾಕಿಭಾಯ್ ಹೊಸ ಸಾಮ್ರಾಜ್ಯ ಕಟ್ಟುವುದು ಹಾಗೂ ಆ ಹಾದಿಯಲ್ಲಿರೋ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವುದು ಕೆಜಿಎಫ್ ಚಾಪ್ಟರ್ 2ನ ಕಥೆಯಾ..?
ಕೆಜಿಎಫ್ ರಿಲೀಸ್ ಆದ ಒಂದು ವರ್ಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಪೋಸ್ಟರ್ ರಿಲೀಸ್ ಮಾಡಿರುವ ಪ್ರಶಾಂತ್ ನೀಲ್, ಪೋಸ್ಟರ್‌ನಲ್ಲಿ ಕೊಟ್ಟಿರುವುದು ಅದೇ ಸುಳಿವು. ಸಾಮ್ರಾಜ್ಯ ಪುನರ್ ನಿರ್ಮಾಣದಲ್ಲಿ..
ಫಸ್ಟ್ ಲುಕ್‌ನಲ್ಲಿ ಕೂಡಾ ಸಂಜಯ್ ದತ್, ರವೀನಾ ಟಂಡನ್ ಪಾತ್ರದ ಸಣ್ಣ ಸುಳಿವನ್ನೂ ಕೊಟ್ಟಿಲ್ಲ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್‌ಗೆ ಶ್ರೀನಿಧಿ ಶೆಟ್ಟಿ ಒಲಿಯುತ್ತಾಳಾ..? ಅಧೀರನ ಕಥೆ ಏನು..? ಹೀಗೆ ಹತ್ತು ಹಲವು ಪ್ರಶ್ನೆಗಳು ಚಿತ್ರದೊಂದಿಗೆ ಮೂಡಿವೆ. ಜಸ್ಟ್ ವೇಯ್ಟ್. 2020ರ ಮಧ್ಯಭಾಗದಲ್ಲಿ ಸಿನಿಮಾ ಬರಬಹುದು.