ಇತ್ತೀಚೆಗಷ್ಟೇ ದಮಯಂತಿಯಾಗಿ ಅಬ್ಬರಿಸಿದ್ದ ರಾಧಿಕಾ ಕುಮಾರಸ್ವಾಮಿ, ಈಗ ನಮಗಾಗಿ ಚಿತ್ರಕ್ಕೆ ಟಾನಿಕ್ ನೀಡುವ ಮನಸ್ಸು ಮಾಡಿದ್ದಾರೆ. ರಘುರಾಮ್ ನಿರ್ದೇಶನದ ನಮಗಾಗಿ ಚಿತ್ರ, ಅರ್ಧಕ್ಕೇ ನಿಂತು ಹೋಗಿತ್ತು. ಆ ಚಿತ್ರದಲ್ಲಿ ರಾಧಿಕಾಗೆ ವಿಜಯ್ ರಾಘವೇಂದ್ರ ಜೋಡಿಯಾಗಿದ್ದರು.
ವಿಜಯ್ ರಾಘವೇಂದ್ರ ಮತ್ತು ರಾಧಿಕಾಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಚಿತ್ರ ನಿನಗಾಗಿ. ಆ ಜೋಡಿ ಮತ್ತೆ ಒಂದಾಗಿದ್ದ ಚಿತ್ರ ನಮಗಾಗಿ. ಈ ಸೆಂಟಿಮೆAಟ್ ಕಾರಣಕ್ಕಾಗಿ ಚಿತ್ರವನ್ನು ತಾವೇ ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದ್ದಾರೆ ರಾಧಿಕಾ.
ರಘುರಾಮ್ ಅವರು ಚಿತ್ರದ ಶೂಟಿಂಗ್ ಆಗಿರುವ ಫುಟೇಜ್ನ್ನು ಎಡಿಟ್ ಮಾಡಿಸುತ್ತಿದ್ದಾರೆ. ಅವುಗಳನ್ನು ನೋಡಿದ ನಂತರ ರಾಧಿಕಾ ನಿರ್ಧಾರ ತೆಗೆದುಕೊಳ್ಳಲಿದ್ದಾರಂತೆ. ರಾಧಿಕಾ ಓಕೆ ಎಂದರೆ ಚಿತ್ರ ಮತ್ತೆ ಟೇಕಾಫ್ ಆಗಲಿದೆ. ಚಿತ್ರದ ಇನ್ನೂ ಶೇ.30ರಷ್ಟು ದೃಶ್ಯಗಳ ಚಿತ್ರೀಕರಣ ಪೆಂಡಿAಗ್ ಇದೆ ಎಂದಿದ್ದಾರೆ ನಿರ್ದೇಶಕ ರಘುರಾಮ್.