ದುನಿಯಾ ವಿಜಿ ಚೊಚ್ಚಲ ನಿರ್ದೇಶನದ ಸಲಗ ಚಿತ್ರದ ಮೇಕಿಂಗ್ ದೃಶ್ಯ ಹೊರಬಿದ್ದಿವೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಿ ಎದುರು ಸಂಜನಾ ಆನಂದ್ ನಾಯಕಿ. ಚಿತ್ರದಲ್ಲಿ ದುನಿಯಾ ವಿಜಿ ಸಾಮ್ರಾಟ್ ಅನ್ನೋ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ದುನಿಯಾ ವಿಜಿ ಮಹಾಕಾಳಮ್ಮ ದೇವಿಯ ಮೊರೆ ಹೋಗಿದ್ದಾರೆ. ಜಯಮ್ಮನ ಮಗ ಚಿತ್ರದಂತೆಯೇ ಈ ಚಿತ್ರದಲ್ಲೂ ತಾವು ಕಾಳಿಯ ಭಕ್ತ ಎಂದು ಋಜುವಾತು ಮಾಡಿದ್ದಾರೆ ದುನಿಯಾ ವಿಜಿ. ಚಿತ್ರದ ಮೊದಲ ಶಾಟ್ನ್ನು ದುನಿಯಾ ವಿಜಿ ದೇವಿಯ ಮೇಲೆಯೇ ಚಿತ್ರೀಕರಿಸಿದ್ದರು. ಅಷ್ಟೇ ಅಲ್ಲ, ಯಲ್ಲಮ್ಮನ ಗುಡ್ಡದಲ್ಲೂ ಚಿತ್ರದ ಚಿತ್ರೀಕರಣವಾಗಿದೆ. ಚಿತ್ರವನ್ನು ದುನಿಯಾ ರಿಲೀಸ್ ಆದ ಡೇಟ್ನಲ್ಲೇ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ.