ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ಹೊರಬಿದ್ದಿದ್ದೇ ತಡ ಟ್ರೆಂಡಿAಗ್ ಶುರುವಾಗಿದೆ. ರಕ್ಷಿತ್ ಶೆಟ್ಟಿ ಹಾಕಿದ ಹ್ಯಾಂಡ್ಸಪ್ ಚಾಲೆಂಜ್ನ್ನು ಅಭಿಮಾನಿಗಳು ಸ್ವೀಕರಿಸಿದ್ದಾರೆ. ಶಾನ್ವಿ ಶ್ರೀವಾತ್ಸವ್ ಅವರೇ ಸ್ಟೆಪ್ ಹಾಕಿದ ಮೇಲೆ ಇನ್ನೇನಿದೆ. ಸಾವಿರಾರು ಅಭಿಮಾನಿಗಳು ಇದು ದೇವರ ಸೃಷ್ಟಿಯ ಅವತಾರ ಎನ್ನುತ್ತಾ ಹ್ಯಾಂಡ್ಸಪ್ ಮಾಡುತ್ತಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾ ಬಂದಾಗ.. ಬೆಳಗೆದ್ದು ಯಾರ ಮುಖವಾ ನಾನಾನು ನೋಡಿದೆ.. ಕನಸಲ್ಲಿ ಅಲೆಲೆಲೆಲೆ.. ಅನ್ನೋದು ಟ್ರೆಂಡಿAಗ್ ಸೃಷ್ಟಿಸಿತ್ತು. ಈಗ ಹ್ಯಾಂಡ್ಸಪ್. ಅಜನೀಶ್ ಲೋಕನಾಥ್ ಸಂಗೀತ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ.
ಇದನ್ನು ನಾವು ನಿರೀಕ್ಷಿಸಿದ್ದೆವು. ಇದು ಚಿತ್ರದ ಸಿಗ್ನೇಚರ್ ಟ್ಯೂನ್ ಮತ್ತು ಸ್ಟೆಪ್. ಈಗ ಜನರೇ ತಮ್ಮ ತಮ್ಮ ಗೆಳೆಯ, ಗೆಳತಿಯರಿಗೆ ಚಾಲೆಂಜ್ ಹಾಕ್ಕೊಂಡು ಸ್ಟೆಪ್ನ್ನು ಜನಪ್ರಿಯ ಮಾಡುತ್ತಿದ್ದಾರೆ ಎನ್ನುವ ಖುಷಿ ನಿರ್ದೇಶಕ ಸಚಿನ್ ಅವರಲ್ಲಿದೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಂತೂ ಹಾಡಿಗೆ ಸಿಗುತ್ತಿರುವ ರೆಸ್ಪಾನ್ಸ್ಗೆ ಥ್ರಿಲ್ ಆಗಿದ್ದಾರೆ. ಅಂದಹಾಗೆ ಹೀರೋ ಹಿಡಿದಿರುವ ಗನ್ ಹೆಸರೇ ಹ್ಯಾಂಡ್ಸಪ್.