` ಅದೊಂದು ಅವಕಾಶಕ್ಕಾಗಿ ಹಠ ಹಿಡಿದ ಕಾದ ನಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhanya ramkumar was awiting for that roleSarvajanikarige Suvarnavakasha Movie Image

ಧನ್ಯಾ ಬಾಲಕೃಷ್ಣ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ನಾಯಕಿ. ವಿಶೇಷ ಅಂದ್ರೆ, ಧನ್ಯಾ ನಟಿಸಿರುವ ಬೇರೆ ಭಾಷೆಯ ಚಿತ್ರಗಳ ಸಂಖ್ಯೆ 25ರ ಗಡಿ ದಾಟಿದೆ. ದೊಡ್ಡ ದೊಡ್ಡ ನಿರ್ದೇಶಕರ ಚಿತ್ರಗಳಲ್ಲಿ, ಸ್ಟಾರ್ ನಟರ ಹಿಟ್ ಚಿತ್ರಗಳಲ್ಲೇ ನಟಿಸಿರುವ ಧನ್ಯಾಗೆ ಸಿಕ್ಕಿದ್ದೆಲ್ಲ ಪೋಷಕ ನಟಿಯ ಪಾತ್ರಗಳೇ.

ಒಂದು ಹಂತದವರೆಗೂ ಅದನ್ನು ಎಂಜಾಯ್ ಮಾಡಿದ ಧನ್ಯಾಗೆ, ಕ್ರಮೇಣ ಬೋರ್ ಹೊಡೆಯೋಕೆ ಶುರುವಾಯ್ತು. ಸ್ವತಃ ಒಂದು ಉದ್ಯೋಗ ಆರಂಭಿಸಿದ ಧನ್ಯಾ, ಪೋಷಕ ಪಾತ್ರಗಳನ್ನೆಲ್ಲ ತಿರಸ್ಕರಿಸುತ್ತಾ ಹೊರಟರು. ಒನ್ಸ್ ಎಗೇಯ್ನ್ ಸ್ಟಾರ್ ನಟರ ಚಿತ್ರಗಳೇ. ಒಳ್ಳೆಯ ಸಂಭಾವನೆಯನ್ನೂ ದೂರ ತಳ್ಳಿದ ಧನ್ಯಾ ಒಂದು ವರ್ಷ ಮನೆಯಲ್ಲೇ ಕುಳಿತುಬಿಟ್ಟರು.

ಆಗ ಸಿಕ್ಕ ಅವಕಾಶವೇ `ಸಾರ್ವಜನಿಕರಿಗೆ ಸುವರ್ಣಾವಕಾಶ'. ಈ ಚಿತ್ರದಲ್ಲಿ ಧನ್ಯಾ ಆರೋಗ್ಯ ಮತ್ತು ಹಣಕಾಸು ಎರಡೂ ಸಮಸ್ಯೆಯಿಂದ ಬಳಲುವ ಯುವತಿಯಾಗಿ ನಟಿಸಿದ್ದಾರೆ.

`ನಾವೇನೇ ನಟಿಸಿದ್ದರೂ ಸ್ಕಿçಪ್ಟ್ ಫೈನಲ್. ಅದು ಚೆನ್ನಾಗಿದ್ದರಷ್ಟೇ ನಮ್ಮ ನಟನೆ, ಪಾತ್ರಕ್ಕೆ ಮಹತ್ವ'' ಎನ್ನುವ ವಾಸ್ತವ ಗೊತ್ತಿರುವ ಕಲಾವಿದೆ ಧನ್ಯಾ.

ರಿಷಿ ಎದುರು ನಾಯಕಿಯಾಗಿ ನಟಿಸಿರುವ ಧನ್ಯಾ, ಅನೂಪ್ ಅವರ ನಿರ್ದೇಶನದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ. ಗುಳ್ಟು ಟೀಂ ಮತ್ತೊಮ್ಮೆ ಜೊತೆಯಾಗಿ ನಿರ್ಮಿಸಿರುವ ಚಿತ್ರವಿದು. ಹೀಗಾಗಿಯೇ ಇಡೀ ಚಿತ್ರರಂಗ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿದೆ.