` ಮನೆ.. ಮದುವೆ.. ಶಾನ್ವಿ ಜೊತೆ ಗಾಸಿಪ್.. ಎಲ್ಲದಕ್ಕೂ ರಕ್ಷಿತ್ ಕೊಟ್ಟರು ಉತ್ತರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rakshit shetty clears rumors
Rakshit Shetty

ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ವಾಪಸ್ ಆಗುತ್ತಿದ್ದಾರೆ. ಬರೋಬ್ಬರಿ 3 ವರ್ಷಗಳ ಗ್ಯಾಪ್. ಲೇಟಾಗಿ ಬಂದರೂ ಲೇಟೆಸ್ಟ್ ಎನ್ನುವಂತೆ ಎಎಸ್ಎನ್ ಚಿತ್ರದ ಟ್ರೇಲರ್, ಹಾಡು ಬೊಂಬಾಟಾಗಿ ಬಂದಿವೆ. 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಅವನೇ ಶ್ರೀಮನ್ನಾರಾಯಣನ ಪ್ರಚಾರದಲ್ಲಿ ಬ್ಯುಸಿಯಾಗಿರೋ ರಕ್ಷಿತ್ ಶೆಟ್ಟಿ, ಜೊತೆ ಜೊತೆಯಲ್ಲೇ ತಮ್ಮ ಕನಸನ್ನೂ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತದ್ದೊಂದು ಮನೆ ಕಟ್ಟಬೇಕು ಅನ್ನೋದು ರಕ್ಷಿತ್ ಕನಸು. ಆ ಕನಸು ಈಡೇರುವವರೆಗೆ ಮದುವೆ ಇಲ್ಲ ಎನ್ನುವುದು ರಕ್ಷಿತ್ ಶೆಟ್ಟಿ ಪ್ರತಿಜ್ಞೆ. ಇನ್ನು ಇದೇ ವೇಳೆ ಅಭಿಮಾನಿಗಳಿಂದ ಸೃಷ್ಟಿಯಾಗಿದ್ದ ಶಾನ್ವಿ ಶ್ರೀವಾತ್ಸವ್ ಜೊತೆಗಿನ ಗಾಸಿಪ್ಗೆ ಒಂದೇ ಮಾತಿನಲ್ಲಿ ಫುಲ್ ಸ್ಟಾಪ್ ಇಟ್ಟಿದ್ದಾರೆ ರಕ್ಷಿತ್ ಶೆಟ್ಟಿ.

ಇದರ ಬಗ್ಗೆ ಪ್ರಶ್ನಿಸಿದ್ದ ಅಭಿಮಾನಿಯೊಬ್ಬರಿಗೆ ಇಂಥವನ್ನೆಲ್ಲ ನಿರ್ಲಕ್ಷಿಸಿ, ಮುಂದೆ ಸಾಗಿ ಎಂಬ ಉತ್ತರ ಕೊಟ್ಟಿದ್ದಾರೆ ರಕ್ಷಿತ್. ಜಸ್ಟ್ ಇಗ್ನೋರ್ ಎಂದಿದ್ದಾರೆ. ಶಾನ್ವಿ, ಅವನೇ ಶ್ರೀಮನ್ನಾರಾಯಣ ಚಿತ್ರದ ನಾಯಕಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಚಿತ್ರದಲ್ಲಿ ಬೊಂಬಾಟ್ ಹಾಡುಗಳ ಜೊತೆ, ಖತರ್ನಾಕ್ ಫೈಟುಗಳೂ ಇವೆಯಂತೆ. ಚಿಕ್ಕಂದಿನಲ್ಲಿ ಕಲಿತ ಕರಾಟೆ ಬಹಳ ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.

Matthe Udbhava Trailer Launch Gallery

Maya Bazaar Pressmeet Gallery