` ನಾರಾಯಣನ ಆ 5 ನಂಬರ್ ಹುಡುಕಿದ್ರೆ.. 2.5 ಲಕ್ಷ ಧನಲಕ್ಷಿö್ಮ ಸಿಗ್ತಾಳೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
watch avane srimamnaryana and win lakshmi
Avane Srimnanarayana Movie Image

ನಂಬರ್ ಹುಡುಕಿ.. 2.5 ಲಕ್ಷ ಬಹುಮಾನ ಗೆಲ್ಲಿ. ಇದು ಅವನೇ ಶ್ರೀಮನ್ನಾರಾಯಣ ಕೊಡುತ್ತಿರುವ ವರ. ಅದಕ್ಕೆ ನೀವು ಅನ್‌ಲಾಕ್ ದಿ ಟ್ರೆಷರ್ ಚಾಲೆಂಜ್ ಸ್ವೀಕರಿಸಬೇಕು.

ಈಗಾಗಲೇ ರಿಲೀಸ್ ಆಗಿರುವ ಎಎಸ್‌ಎನ್ ಟ್ರೇಲರಿನಲ್ಲಿ 5 ನಂಬರುಗಳಿವೆ. ಅವು ಎಲ್ಲೆಲ್ಲಿಯೋ ಇವೆ. ಅವುಗಳನ್ನು ಹುಡುಕೋದು ನಿಮಗಿರೋ ಚಾಲೆಂಜ್.

ಪುಷ್ಕರ್ ವೆಬ್‌ಸೈಟ್‌ಗೆ ಹೋಗಿ. ಅಲ್ಲೊಂದು ಲಾಕ್ ಆಗಿರುವ ಟ್ರೇಲರ್ ಸಿಗುತ್ತೆ. 5 ಸಿಂಗಲ್ ನಂಬರ್ ಡಿಜಿಟ್ ಹಾಕುವ ಜಾಗವೂ ಇದೆ. ನೀವು ಅಲ್ಲಿ ಆ 5 ನಂಬರ್ ಹಾಕಿದರೆ, ಟ್ರೇಲರ್ ಓಪನ್ ಆಗುತ್ತೆ. 2.5 ಲಕ್ಷ ಬಹುಮಾನವೂ ಸಿಗುತ್ತೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ನಟಿಸಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ. ಅತೀ ಹೆಚ್ಚು ಜನ ವೀಕ್ಷಿಸಿರುವ ಟ್ರೇಲರ್ ಆಗಿ ದಾಖಲೆ ಬರೆದಿರುವ ಅವನೇ ಶ್ರೀಮನ್ನಾರಾಯಣ ಡಿ.27ರಂದು ರಿಲೀಸ್ ಆಗಲಿದೆ.

Matthe Udbhava Trailer Launch Gallery

Maya Bazaar Pressmeet Gallery