` 2020ಕ್ಕೆ ರಶ್ಮಿಕಾ ಮಂದಣ್ಣ ವೇಯ್ಟಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
5 movies of rashmika to release in 2020
Rashmika Mandanna

 ರಶ್ಮಿಕಾ ಮಂದಣ್ಣ ಅವರಿಗೆ 2019 ಒಂದು ರೀತಿಯಲ್ಲಿ ಖುಷಿಯ ವರ್ಷವೇ. ಆದರೆ, ಸಂಖ್ಯೆಗಳ ದೃಷ್ಟಿಯಲ್ಲಿ ಅಷ್ಟೇನೂ ಮಹತ್ವದ್ದಲ್ಲ. ಏಕೆಂದರೆ ಈ ವರ್ಷ ರಶ್ಮಿಕಾ ಅವರ ಎರಡು ಚಿತ್ರಗಳೇ ರಿಲೀಸ್ ಆದವು. ಕನ್ನಡದಲ್ಲಿ ಯಜಮಾನ ಮತ್ತು ತೆಲುಗಿನಲ್ಲಿ ಡಿಯರ್ ಕಾಮ್ರೇಡ್. ಆದರೆ, 2020, ರಶ್ಮಿಕಾ ವರ್ಷವಾಗಲಿದೆ. ಏಕೆಂದರೆ ರಶ್ಮಿಕಾ ಅವರ 5 ಚಿತ್ರಗಳು 2020ಕ್ಕೆ ರಿಲೀಸ್ ಆಗಲಿವೆ.

ಕನ್ನಡದಲ್ಲಿ ಧ್ರುವ ಸರ್ಜಾ ಜೊತೆಗೆ ಪೊಗರು, ತೆಲುಗಿನಲ್ಲಿ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು, ಅಲ್ಲು ಅರ್ಜುನ್ ಜೊತೆಗಿನ ಒಂದು ಸಿನಿಮಾ, ನಿತಿನ್ ಜೊತೆಗಿನ ಭೀಷ್ಮ, ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿರುವ ಸುಲ್ತಾನ್ ರಿಲೀಸ್ ಆಗಲಿವೆ. ಜನವರಿಯಿಂದಲೇ ರಶ್ಮಿಕಾ ಹಬ್ಬ ಶುರುವಾಗಲಿದೆ.

ಇಷ್ಟೂ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಇಂದು ಬೆಂಗಳೂರಿನಲ್ಲಿದ್ದರೆ, ರಾತ್ರಿಯ ಹೊತ್ತಿಗೆ ಹೈದರಾಬಾದ್, ಮತ್ತೆ ಚೆನ್ನೆöÊ.. ಹೀಗೆ ರೆಸ್ಟ್ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ದೇವರ ದಯೆ, ಪ್ರೇಕ್ಷಕರ ಪ್ರೀತಿ.. ಒಳ್ಳೊಳ್ಳೆಯ ಸಿನಿಮಾಗಳು ಸಿಗುತ್ತಿವೆ. ಬ್ಯುಸಿಯಿದ್ದೇನೆ ಎಂದಿದ್ದಾರೆ ರಶ್ಮಿಕಾ.

Matthe Udbhava Trailer Launch Gallery

Maya Bazaar Pressmeet Gallery