` ನಿರ್ದೇಶಕರೇ.. ಲೇಟ್ ಮಾಡಿದ್ರೆ ಅಷ್ಟೆ.. ಅಭಿಮಾನಿಗಳು ಸಿನಿಮಾನೇ ಮಾಡಿ ಮುಗಿಸ್ತಾರೆ..!!! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
james craze goes another level
James

ನಿರ್ದೇಶಕ, ಯಾವುದೇ ಸಿನಿಮಾದ ರಿಯಲ್ ಹೀರೋ. ಆದರೆ, ಹೀರೋಗೇ ಚಾಲೆಂಜ್ ಹಾಕೋ ಕೆಲಸ ಮಾಡೋದು ಅಭಿಮಾನಿಗಳು. ಅವರು ತಮ್ಮ ಅಭಿಮಾನದ ನಟನನ್ನು ನೋಡಲು ಎಷ್ಟರಮಟ್ಟಿಗೆ ಕಾಯುತ್ತಿರುತ್ತಾರೆ ಎಂದರೆ.. ಅದನ್ನು ಪದಗಳಲ್ಲಿ ಬಣ್ಣಿಸೋಕೆ ಸಾಧ್ಯವಿಲ್ಲ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಇದ್ದಾರಲ್ಲ..

ನೀವೇ ನೋಡಿ.. ಭರ್ಜರಿ ಚೇತನ್ ನಿರ್ದೇಶನದಲ್ಲಿ ಜೇಮ್ಸ್ ಬರಲಿದೆ ಅನ್ನೋ ಸುದ್ದಿ ಗೊತ್ತಿದೆ ತಾನೇ. ಚೇತನ್ ಅದನ್ನು ಸ್ವಲ್ಪ ಅರ್ಜೆಂಟ್ ಆಗಿಯೇ ಅನೌನ್ಸ್ ಮಾಡಿದ್ದರು. ಈಗ ನೋಡಿದ್ರೆ.. ಅಪ್ಪು ಫ್ಯಾನ್ಸ್ ಎಷ್ಟು ಫಾಸ್ಟ್ ಆಗಿದ್ದಾರೆ ಅಂದ್ರೆ.. ನಿರ್ದೇಶಕರಿಗೇ ಐಡಿಯಾ ಕೊಟ್ಟಿದ್ದಾರೆ.

ತಮ್ಮದೇ ಕಲ್ಪನೆಯಲ್ಲಿ ಡಿಸೈನ್ ಡಿಸೈನ್ ಪೋಸ್ಟರ್ ರೆಡಿ ಮಾಡಿಬಿಟ್ಟಿದ್ದಾರೆ. ಅಭಿಮಾನಿಗಳು ಎಷ್ಟು ವೇಯ್ಟಿಂಗಲ್ಲಿದ್ದಾರೆ ಅಂದ್ರೆ, ಚೇತನ್ ಲೇಟ್ ಮಾಡಿದ್ರೆ.. ಅವರೇ ಸಿನಿಮಾನೂ ಮಾಡಿಬಿಡ್ತಾರೇನೋ..

Matthe Udbhava Trailer Launch Gallery

Maya Bazaar Pressmeet Gallery