` ಕೆಇಬಿ ಕೆಂಪಣ್ಣನಾದ ತಬಲಾ ನಾಣಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tabla nani in and as keb kempanna
Tabla Nani

ಕೆಮಿಸ್ಟಿç ಆಫ್ ಕರಿಯಪ್ಪ ಚಿತ್ರದ ಮೂಲಕ ಮತ್ತೊಮ್ಮೆ ಇಡೀ ಚಿತ್ರರಂಗದ ಗಮನ ಸೆಳೆದ ತಬಲಾ ನಾಣಿ, ಈಗ ಕೆಇಬಿ ಕೆಂಪಣ್ಣನಾಗುತ್ತಿದ್ದಾರೆ. ನಾಣಿ ಎಂದ ಮೇಲೆ ಕಾಮಿಡಿ ಇರಲೇಬೇಕಲ್ಲ. ನಾಣಿಗೆ ಕೆಂಪಣ್ಣನ ವೇಷ ಹಾಕಿಸುತ್ತಿರುವುದು ರ‍್ಯಾಂಬೊ ಮತ್ತು ಪುಂಗಿದಾಸ ಚಿತ್ರಗಳ ನಿರ್ದೇಶಕ ಶ್ರೀನಾಥ್. ವಿಕ್ಟರಿ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದ ಶ್ರೀನಾಥ್, ಈಗ ಮತ್ತೊಮ್ಮೆ ತಮ್ಮ ಸ್ಪೆಷಾಲಿಟಿ ಕಾಮಿಡಿ ಜಾನರ್ ಮೂಲಕವೇ ಬರುತ್ತಿದ್ದಾರೆ.

ಮಗನ ಭವಿಷ್ಯ ತಿಳಿದುಕೊಳ್ಳೋಕೆ ಜ್ಯೋತಿಷಿಗಳ ಹಿಂದೆ ಬೀಳುವ ಅಪ್ಪ, ಅವರು ಹೇಳಿದ್ದೆಲ್ಲ ಸುಳ್ಳಾದಾಗ ಆಗುವ ಹತಾಶೆ, ಮಕ್ಕಳಿಗಾಗಿ ತಂದೆ, ತಾಯಿ ಅನುಭವಿಸುವ ಕಷ್ಟದ ಜೀವನ.. ಇವೆಲ್ಲವನ್ನೂ ಕಾಮಿಡಿ ಜಾನರ್‌ನಲ್ಲಿಯೇ ಹೇಳಲು ಹೊರಟಿದ್ದಾರೆ ಶ್ರೀನಾಥ್. ಇವರ ಈ ಕನಸುಗಳಿಗೆಲ್ಲ ಜೀವ ತುಂಬೋಕೆ ರೆಡಿಯಾಗಿರುವುದು ತಬಲಾ ನಾಣಿ.

Sri Bharaha Baahubali Pressmeet Gallery

Govinda Govinda Pressmeet Gallery