ಒಂದೆಡೆ ನಿರ್ದೇಶಕ ಮಂಜು ಸ್ವರಾಜ್, ಮನೆ ಮಾರಾಟಕ್ಕಿದೆ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಮತ್ತೊಂದೆಡೆ ರಾಧಿಕಾ ಕುಮಾರಸ್ವಾಮಿ, ದಮಯಂತಿ ಮೂಲಕ ಕಮ್ಬ್ಯಾಕ್ ಮಾಡಿ ಪ್ರೇಕ್ಷಕರ ರಿಯಾಕ್ಷನ್ ನೋಡುತ್ತಿದ್ದಾರೆ. ಇವರಿಬ್ಬರೂ ಈಗ ಜೊತೆ ಜೊತೆಯಾಗುತ್ತಿದ್ದಾರೆ ಅನ್ನೋದು ಗಾಂಧಿನಗರದ ಸೆನ್ಸೇಷನ್.
ಮಂಜು ಸ್ವರಾಜ್ ಅವರು ಹೇಳಿರೋ ಕಥೆಯೊಂದರ ಒನ್ಲೈನ್, ರಾಧಿಕಾ ಅವರಿಗೂ ಇಷ್ಟವಾಗಿದೆಯಂತೆ. ಅದೊಂದು ಕಾಮಿಡಿ ಬೇಸ್ ಇರುವ ಲವ್ ಸ್ಟೋರಿಯಾಗಿದ್ದು, ಸ್ವತಃ ನಿರ್ಮಾಪಕಿಯಾಗಲು ಆಸಕ್ತಿ ತೋರಿಸಿದ್ದಾರಂತೆ ರಾಧಿಕಾ. ಎಲ್ಲವೂ ಅಂದುಕೊAಡAತೆಯೇ ಆದರೆ, ಮುಂದಿನ ವರ್ಷದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಶಮಿಕಾ ಬ್ಯಾನರ್ನಲ್ಲಿ ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರ ಶುರುವಾಗಲಿದೆ.