ಅಪ್ಪನಿಗೋ ಮೈತುಂಬಾ ಸಾಲ. ಎಂಬಿಎ ಪದವೀಧರನಾಗಿದ್ದರೂ, ಅಪ್ಪನ ಸಾಲ ಕಾಡುತ್ತಲೇ ಇದೆ. ಆಗ ಸಿಗುತ್ತೆ ಒಂದು ಬಂಪರ್ ಆಫರ್. ಆ ಆಫರ್ ಹಿಂದೆ ಹೊರಡುತ್ತಾರೆ ರಿಷಿ. ಅಲ್ಲಿಂದ ಶುರು.. ಕಾಮಿಡಿಯ ಮೆರವಣಿಗೆ. ಇದು ಸಾರ್ವಜನಿಕರಿಗೊಂದು ಸುವರ್ಣಾವಕಾಶ ಚಿತ್ರದ ಒನ್ ಲೈನ್ ಸ್ಟೋರಿ.
ಕವಲುದಾರಿ ನಂತರ ರಿಷಿ ನಟಿಸಿರುವ ಚಿತ್ರವಿದು. ಮದುವೆಯಾದ ಮೇಲೆ ರಿಲೀಸ್ ಆಗುತ್ತಿರುವ ರಿಷಿಯ ಮೊದಲ ಚಿತ್ರವೂ ಇದೇ. ರಿಷಿ ಎದುರು ಧನ್ಯಾ ರಾಮಕೃಷ್ಣ ನಾಯಕಿಯಾಗಿ ನಟಿಸಿದ್ದರೆ, ದತ್ತಣ್ಣ, ರಂಗಾಯಣ ರಘು, ಶಾಲಿನಿ, ಮಿತ್ರ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.
ಅಂದಹಾಗೆ ಈ ಚಿತ್ರಕ್ಕೆ ಕಥೆ ಜನಾರ್ದನ್ ಚಿಕ್ಕಣ್ಣ ಮತ್ತು ಹರಿಕೃಷ್ಣ ಅವರದ್ದು. ಅದೇ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ. ನೆನಪಿದೆ ತಾನೆ. ಅನೂಪ್ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು. ಅರ್ಧಕ್ಕರ್ಧ ಗುಳ್ಟು ಟೀಂ ಚಿತ್ರದಲ್ಲಿದೆ. ಡಿಸೆಂಬರ್ 20ರಂದು ಚಿತ್ರ ರಿಲೀಸ್ ಆಗುತ್ತಿದೆ.