ಕೆಜಿಎಫ್ 2ನಲ್ಲಿ ಏನಾಗ್ತಿದೆ..? ಅಪ್ಡೇಟ್ ಕೊಡಿ. ಟೀಸರ್, ಟ್ರೇಲರ್ ಯಾವಾಗ..? ಹೇಳಿ.. ಎಂದು ಒಂದೇ ಸಮನೆ ಬೆನ್ನು ಹತ್ತಿರೋ ಕೆಜಿಎಫ್ ಫ್ಯಾನ್ಸ್ಗಾಗಿ ಈ ನ್ಯೂಸ್. ಟೀಸರ್ ಬಿಡುಗಡೆಯಾಗೋ ಕಾಲ ಬಂದಾಗಿದೆ. ಇನ್ನೊಂದು ತಿಂಗಳು. ಜನವರಿ 8ರಂದು ಕೆಜಿಎಫ್ 2 ಟೀಸರ್ ಹೊರಬೀಳಲಿದೆ.
ಕೆಜಿಎಫ್ 2ನಲ್ಲಿ ಯಶ್ ಜೊತೆ ಸಂಜಯ್ ದತ್ ಕೂಡಾ ನಟಿಸಿದ್ದು, ಪ್ರಶಾಂತ್ ನೀಲ್ ತಾಕತ್ತಿನ ಮೇಲೆ ಭಾರಿ ನಿರೀಕ್ಷೆಯಿದೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ ಚಾಪ್ಟರ್ 2ನಲ್ಲಿ ಏನೇನು ಸೀಕ್ರೆಟ್, ಥ್ರಿಲ್ಲಿಂಗ್ ಅಂಶಗಳಿವೆಯೋ.. ಮೊದಲ ಗುಟ್ಟು ಹೊರಬೀಳೋದು ಜನವರಿ 8ಕ್ಕೆ.