` ಊಟಿಯಲ್ಲಿ ರೊಮ್ಯಾನ್ಸ್ ಮಾಡೋಕೆ ಜಾಗ ಹುಡುಕ್ತಾವ್ರೆ ಪ್ರೇಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
prem looking for romantic places in ooty
Prem in Ooty

ಏಕ್ ಲವ್ ಯಾ ಚಿತ್ರದ ಕೆಲವು ಷೆಡ್ಯೂಲ್ ಶೂಟಿಂಗ್ ಮುಗಿಸಿರುವ ಜೋಗಿ ಪ್ರೇಮ್, ಈಗ ಊಟಿಗೆ ಹೊರಟು ನಿಂತಿದ್ದಾರೆ. ಕಾರಣ ಇಷ್ಟೆ, ಅವರು ಅಲ್ಲಿ ರೊಮ್ಯಾನ್ಸ್ ಮಾಡಿಸಬೇಕು. ಹೀರೋ ಹೀರೋಯಿನ್ ನಡುವಣ ರೊಮ್ಯಾಂಟಿಕ್ ಸೀನ್ಸ್ಗಳಿಗೆ ಊಟಿಯಲ್ಲಿ ಶೂಟಿಂಗ್ ಆಗಬೇಕು. ಈಗಾಗಲೇ ಎಣ್ಣೆ ಸಾಂಗ್ ಶೂಟ್ ಮುಗಿಸಿರುವ ಟೀಂ, ಈಗ ಡ್ಯುಯೆಟ್ ಸಾಂಗ್ ಶೂಟಿಂಗಿಗೆ ಹೊರಟಿದೆ.

ಡಿಸೆಂಬರ್ ಚಳಿಯಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ನಡೆಯಲಿದ್ದು, ಹೀರೋ ರಾಣಾ, ಹೀರೋಯಿನ್ ರೀಷ್ಮಾ ನಾಣಯ್ಯ ಪಾಲ್ಗೊಳ್ಳಲಿದ್ದಾರೆ. ರಚಿತಾ ರಾಮ್ ಸಿನಿಮಾದಲ್ಲಿ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿ.

 

Sri Bharaha Baahubali Pressmeet Gallery

Maya Bazaar Pressmeet Gallery