` ಕನ್ನಡ ಮೇಷ್ಟçನ್ನು ನೋಡ್ತಾರಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
cm and educational minister likely to watch kaalidasa kananda mestru
Kaalidasa Kananda Mestru

ಕಾಳಿದಾಸ ಕನ್ನಡ ಮೇಷ್ಟುç, ತಾತ, ಮಕ್ಕಳು, ಮೊಮ್ಮಕ್ಕಳು.. ಹೀಗೆ 3 ಜನರೇಷನ್‌ನವರು ಒಟ್ಟಿಗೇ ಇಷ್ಟಪಟ್ಟು ಹಿಟ್ ಆಗಿರುವ ಸಿನಿಮಾ. ಕನ್ನಡ ಕಲಿಕೆಯಂತಹ ಗಂಭೀರ ವಿಷಯವನ್ನು ಹಾಸ್ಯಮಯವಾಗಿಯೇ ಹೇಳಿ, ಹೃದಯ ಮುಟ್ಟಿ ಗೆದ್ದಿದ್ದಾರೆ ನಿರ್ದೇಶಕ ಕವಿರಾಜ್. ಹೀಗಾಗಿಯೇ ವೀಕ್ ಡೇಸ್‌ಗಳಲ್ಲೂ ಕಾಳಿದಾಸ ಕನ್ನಡ ಮೇಷ್ಟುç ಹೌಸ್‌ಫುಲ್. ಈಗ ಚಿತ್ರವನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಈ ಚಿತ್ರವನ್ನು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ತೋರಿಸುವ ಮನಸ್ಸಿತ್ತು. ಆದರೆ ಉಪಚುನಾವಣೆ ಭರಾಟೆಯಲ್ಲಿ ಅದು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಹಾಗೂ ಸುರೇಶ್ ಕುಮಾರ್ ಅವರಿಗೆ ಸಮಯ ಕೇಳಲಾಗಿದೆ. ಶೀಘ್ರದಲ್ಲೇ ಅವರು ಸಿನಿಮಾ ವೀಕ್ಷಿಸಲಿದ್ದಾರೆ ಬಿಜೆಪಿ ಮುಖಂಡರೂ ಆಗಿರುವ ನಟ ಜಗ್ಗೇಶ್.

ಸಿನಿಮಾ ನೋಡಿದವರು ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸುವ ರೀತಿ ಬದಲಾಗಿದೆ ಎನ್ನುವುದೇ ಈ ಸಿನಿಮಾದ ಅತಿದೊಡ್ಡ ಯಶಸ್ಸು ಎನ್ನುತ್ತಾರೆ ನಿರ್ದೇಶಕ ಕವಿರಾಜ್. ಒಟ್ಟಿನಲ್ಲಿ ಇದೆಲ್ಲದರಿಂದ ಹ್ಯಾಪಿಯಾಗಿರೋದು ಜಗ್ಗೇಶ್, ಮೇಘನಾ, ಕವಿರಾಜ್ ಅವರಿಗಿಂತ ಹೆಚ್ಚಾಗಿ ನಿರ್ಮಾಪಕ ಉದಯ್ ಕುಮಾರ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery