ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ಒನ್ಸ್ ಎಗೇಯ್ನ್ ಸಿಂಪಲ್ ಸುನಿ ಮ್ಯಾಜಿಕ್. ಸಿಂಪಲ್ಲಾಗೊAದ್ ಲವ್ ಸ್ಟೋರಿ ಮೂಲಕ ಟ್ರೆಂಡ್ ಸೃಷ್ಟಿಸಿದ್ದ ಸುನಿ, ಮತ್ತೊಮ್ಮೆ ಮೋಡಿ ಮಾಡಿದ್ದರು. ಆ ಚಿತ್ರಕ್ಕೆ ನಿರ್ಮಾಪಕರಾಗಿದ್ದವರು ಅಶು ಬೆದ್ರ.
ಆ ಸಿನಿಮಾ ಮಾಡುವಾಗ ಹುಟ್ಟಿದ್ದ ಕನಸನ್ನು ಈಗ ನನಸು ಮಾಡಿಕೊಂಡಿದ್ದಾರೆ ಅಶು ಬೆದ್ರ. ಅಳಿದು ಉಳಿದವರು ಸಿನಿಮ ಮೂಲಕ. ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ, ಟ್ರೇಲರ್‌ನಲ್ಲೇ ಭಯಂಕರ ಕುತೂಹಲ ಹುಟ್ಟಿಸಿದೆ.
ಅರವಿಂದ್ ಶಾಸ್ತಿç ನಿರ್ದೇಶಕದ ಅಳಿದು ಉಳಿದವರು, ರೆಗ್ಯುಲರ್ ಜಾನರ್‌ನಿಂದ ಹೊರತಾಗಿ ಕಾಣುತ್ತಿರುವ ವಿಭಿನ್ನ ಶೈಲಿಯ ಸಿನಿಮಾ. ಅಶು ಬೆದ್ರ ಎದುರು ನಾಯಕಿಯಾಗಿರುವುದು ಸಂಗೀತಾ ಭಟ್.