` 2500 ಕೋಟಿ ದುಡಿದ ಕನ್ನಡ ಚಿತ್ರ ಯಾವುದು ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
huccha venkat's movie made 2500 crores as per wikipedia
Huccha Venkat

ಕನ್ನಡದಲ್ಲಿ ಅತೀ ದೊಡ್ಡ ಹಿಟ್ ಸಿನಿಮಾ ಯಾವುದು..? ಕೆಜಿಎಫ್..? ರಾಜಕುಮಾರ..? ಕುರುಕ್ಷೇತ್ರ..? ಪೈಲ್ವಾನ್..? ಇದ್ಯಾವುದೂ ಅಲ್ಲ.. ನಿಮ್ಮ ಊಹೆಯೆಲ್ಲ ತಪ್ಪು. ಕನ್ನಡದ ಅತೀ ದೊಡ್ಡ ಹಿಟ್ ಸಿನಿಮಾ, ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಇದ್ಯಾವುದೂ ಅಲ್ಲ, ವಿಕಿಪೀಡಿಯಾ ಪ್ರಕಾರ ಅದು ಹುಚ್ಚ ವೆಂಕಟ್.

ಹೌದು, ವಿಕಿಪೀಡಿಯಾದಲ್ಲಿ ಈ ರೀತಿಯ ಅಪ್‌ಡೇಟ್ ಸಂಚಲನ ಸೃಷ್ಟಿಸಿದ್ದಂತೂ ಸತ್ಯ. ವಿಕಿಪೀಡಿಯಾವನ್ನು ನಾವು.. ನೀವು.. ಯಾರು ಬೇಕಾದರೂ ಅಪ್‌ಡೇಟ್ ಮಾಡಬಹುದು. ಈ ಅವಕಾಶವನ್ನೇ ಬಳಸಿಕೊಂಡು ಯಾರೋ ಕಿಡಿಗೇಡಿಗಳು ಈ ತರಲೆ ಸೃಷ್ಟಿಸಿದ್ದಾರೆ.

ಕನ್ನಡದಲ್ಲಿ ಸದ್ಯಕ್ಕೆ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆ ಕೆಜಿಎಫ್ ಹೆಸರಲ್ಲಿದೆ. 2ನೇ ಸ್ಥಾನದಲ್ಲಿರೋದು ರಾಜಕುಮಾರ. ಹೀಗಿರುವಾಗ ನನ್ನ ಚಿತ್ರಕ್ಕೆ ಜನರೇ ಬರ್ತಿಲ್ಲ.. ನನ್ ಮಗಂದ್.. ಎಂದು ಅಬ್ಬರಿಸಿದ್ದ ಹುಚ್ಚ ವೆಂಕಟನ ಹುಚ್ಚ ವೆಂಕಟ್ ಹಿಟ್ ಆಗೋದು ಹೇಗೆ ಸಾಧ್ಯ..? ಆದರೆ.. ವಿಕಿಪೀಡಿಯಾದಲ್ಲಿ ಈ ತರಲೆ ಸುದ್ದಿಯಾಗಿದ್ದಂತೂ ಸತ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery