` ಕಾಶಿಯಲ್ಲಿ ಜಯತೀರ್ಥ, ಜಮೀರ್ ಅಹ್ಮದ್ ಪುತ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bellbottom jayatheertha in kashi for his next movie banaras
Jayatheertha

ಬೆಲ್‌ಬಾಟಂ ನಂತರ ನಿರ್ದೇಶಕ ಜಯತೀರ್ಥ, ಬನಾರಸ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಅವರು ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ ಜಹೀದ್ ಖಾನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಬನಾರಸ್ ಚಿತ್ರೀಕರಣಕ್ಕಾಗಿ ತಮ್ಮ ಅಚ್ಚುಮೆಚ್ಚಿನ ತಾಣ ಕಾಶಿಯಲ್ಲಿ ಬೀಡುಬಿಟ್ಟಿದ್ದಾರೆ. ಕಾಶಿ ಚಿತ್ರೀಕರಣದ ಬಳಿಕ ತಂಡ ರಾಮೇಶ್ವರಕ್ಕೂ ಹೋಗಲಿದೆಯಂತೆ.

ಪ್ರೀತಿ, ಪ್ರೇಮ, ಭಯ, ಭಕ್ತಿ ಎಲ್ಲವೂ ಇರುವ ಚಿತ್ರವಿದು ಎನ್ನುವ ಜಯತೀರ್ಥ, ತಮ್ಮ ಮೊದಲ ಚಿತ್ರ ಒಲವೇ ಮಂದಾರವನ್ನೂ ಕಾಶಿಯಲ್ಲೇ ಚಿತ್ರೀಕರಿಸಿದ್ದರು. ಸೋನೆಲ್ ಮಂಥೆರೋ ನಾಯಕಿಯಾಗಿರುವ ಚಿತ್ರ ಹಲವು ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿದೆ. ಹೊಸ ವರ್ಷವನ್ನೂ ಕಾಶಿಯಲ್ಲೇ ಸೆಲಬ್ರೇಟ್ ಮಾಡಲಿದೆಯಂತೆ ಚಿತ್ರತಂಡ.

India Vs England Pressmeet Gallery

Odeya Audio Launch Gallery