` ಮದಕರಿ ನಾಯಕನಾಗಲು ದರ್ಶನ್ ಸೂಕ್ತ - ಶರಣರ ನುಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan is suitable for madakari nayaka
Darshan, Muruga Shree

ಸಂಗೊಳ್ಳಿ ರಾಯಣ್ಣ, ದುರ್ಯೋಧನನಾಗಿ ತೆರೆಯ ಮೇಲೆ ಮಿಂಚಿದ್ದ ಚಾಲೆಂಜಿAಗ್ ಸ್ಟಾರ್ ದರ್ಶನ್, ಈಗ ಮದಕರಿ ನಾಯಕನಾಗುತ್ತಿದ್ದಾರೆ. ಆ ಪಾತ್ರವನ್ನು ಮಾಡಲು ಸೂಕ್ತ ತಯಾರಿಯನ್ನೂ ನಡೆಸಿರುವ ದರ್ಶನ್‌ಗೆ ಈಗ ಶರಣರ ಮಾತಿನ ಬಲವೂ ಸಿಕ್ಕಿದೆ.

ಚಿತ್ರದುರ್ಗದಲ್ಲಿ ಮುಹೂರ್ತಕ್ಕೂ ಮೊದಲು ಇಡೀ ಚಿತ್ರತಂಡ ಮದಕರಿ ನಾಯಕನ ಇಷ್ಟದೇವತೆಯರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯ್ತು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು `ಮದಕರಿ ನಾಯಕನ ಪಾತ್ರಕ್ಕೆ ದರ್ಶನ್ ಅತ್ಯಂತ ಸೂಕ್ತ ಆಯ್ಕೆ. ದರ್ಶನ್ ಅತ್ಯುತ್ತಮವಾಗಿ ನಟಿಸುತ್ತಾರೆ ಎಂಬ ನಿರೀಕ್ಷೆ ಇದೆ. ಚಿತ್ರತಂಡ ಮದಕರಿ ನಾಯಕನನ್ನು ಉತ್ತಮವಾಗಿ ತರುತ್ತಾರೆ ಎಂಬ ನಂಬಿಕೆಯಿದೆ' ಎಂದರು.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದಲ್ಲಿ ಇಬ್ಬರು ನಾಯಕಿಯರಿರುತ್ತಾರೆ ಎಂಬ ಸುಳಿವು ಕೊಟ್ಟರು. ಯಾರು ಎಂದು ಹೇಳಲಿಲ್ಲ. ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕೂಡಾ ಗುಟ್ಟು ಬಿಟ್ಟುಕೊಡಲಿಲ್ಲ.

India Vs England Pressmeet Gallery

Odeya Audio Launch Gallery