ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆಯ ನಂತರ ಮದಗಜನಾಗುತ್ತಿರುವುದು ಗೊತ್ತಿರೋ ವಿಷಯ. ಈ ಚಿತ್ರಕ್ಕಾಗಿ ಶ್ರೀಮುರಳಿ ಲುಕ್ ಕಂಪ್ಲೀಟ್ ಬದಲಾಗಿದೆ. ಮದಗಜ ಚಿತ್ರದಲ್ಲಿ ಮುರಳಿ ಮ್ಯಾಚೋ ಲುಕ್ಕಿನಲ್ಲಿ ಕಂಗೊಳಿಸಲಿದ್ದಾರೆ.
ಇತ್ತೀಚೆಗೆ ಉದ್ದ ಕೂದಲು, ಗಡ್ಡದಲ್ಲಿ ಮಿಂಚಿದ್ದ ಶ್ರೀಮುರಳಿಯ ಗಡ್ಡ ಮತ್ತು ಕೂದಲು ಎರಡಕ್ಕೂ ಕತ್ತರಿ ಹಾಕಿಸಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ಉಮಾಪತಿ ನಿರ್ಮಾಣದ ಮದಗಜ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಜನವರಿಯಲ್ಲಿ ಶೂಟಿಂಗ್ ಶುರುವಾಗಲಿದೆ.