` ಕನ್ನಡಕ್ಕೊಬ್ಬರೇ ಹ್ಯಾಟ್ರಿಕ್ ಹೀರೋ - ದರ್ಶನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna is the one and only hattrick star in sandalwood says darshan
Shivarajkumar, Darshan

ಮೊನ್ನೆ ಮೊನ್ನೆಯಷ್ಟೇ ಒಟ್ಟಿಗೇ ಚಿತ್ರವೊಂದರ ಮುಹೂರ್ತದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು ಶಿವಣ್ಣ ಮತ್ತು ದರ್ಶನ್. ಇದು ಮತ್ತೊಂದು ಖುಷಿ ವಿಷಯ. ಕನ್ನಡ ಚಿತ್ರರಂಗದಲ್ಲಿ ಸತತ ಹ್ಯಾಟ್ರಿಕ್ ಹಿಟ್ ಕೊಟ್ಟವರು ಹಲವರಿದ್ದರೂ, ಆರಂಭದ ಚಿತ್ರಗಳಲ್ಲಿ ಅದ್ಭುತ ಹಿಟ್ ಕೊಟ್ಟು ಆ ಬಿರುದು ತನ್ನದಾಗಿಸಿಕೊಂಡವರು ಶಿವಣ್ಣ. ಇತ್ತೀಚೆಗೆ ಧ್ರುವ ಸರ್ಜಾ ಕೂಡಾ ಇದೇ ಸಾಧನೆ ಮಾಡಿದ್ದರು. ಆದರೆ, ಕನ್ನಡ ಚಿತ್ರರಂಗಕ್ಕೆ ನಟ ಶಿವರಾಜ್‌ಕುಮಾರ್‌ ಒಬ್ಬರೇ ಹ್ಯಾಟ್ರಿಕ್‌ ಹೀರೊ ಎಂದು ಹೇಳಿರುವುದು ದರ್ಶನ್.

ಒಡೆಯ ಚಿತ್ರದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಅವರಿಗೆ ಈ ಪ್ರಶ್ನೆ ಎದುರಾಯಿತು. ಯಜಮಾನ ಮತ್ತು ಕುರುಕ್ಷೇತ್ರಗಳ ಮೂಲಕ ಸತತ ಹಿಟ್ ಕೊಟ್ಟಿರುವ ದರ್ಶನ್, ಈಗ ಒಡೆಯ ಬಿಡುಗಡೆಗೆ ರೆಡಿಯಾಗಿದ್ದಾರೆ. ಈ ವೇಳೆಯಲ್ಲಿ ಸಹಜವಾಗಿಯೇ ಹ್ಯಾಟ್ರಿಕ್ ಬಾರಿಸೋ ಆಸೆ ಇದೆಯಾ ಎಂಬ ಪ್ರಶ್ನೆ ದರ್ಶನ್ ಎದುರು ಬಂತು. ಇದಕ್ಕೆ ಉತ್ತರ ಕೊಟ್ಟ ದರ್ಶನ್, ಕನ್ನಡ ಚಿತ್ರರಂಗಕ್ಕೆ ನಟ ಶಿವರಾಜ್‌ಕುಮಾರ್‌ ಒಬ್ಬರೇ ಹ್ಯಾಟ್ರಿಕ್‌ ಹೀರೊ.  ನಾನು ಹ್ಯಾಟ್ರಿಕ್‌ ಸಾಧಿಸುತ್ತೇನೆ ಎಂದು ಹೇಳುವುದಿಲ್ಲ. ಒಳ್ಳೆಯ ಸಿನಿಮಾ ಕೊಡುವುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.

India Vs England Pressmeet Gallery

Odeya Audio Launch Gallery