` ಟಿವಿ ಶೋ ನಿರೂಪಣೆಗೆ ದರ್ಶನ್ ರೆಡಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan all set to enter small screen
Darshan Image

ಚಾಲೆಂಜಿAಗ್ ಸ್ಟಾರ್ ದರ್ಶನ್ ಟಿವಿಯಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ದರ್ಶನ್ ತಮ್ಮ ಚಿತ್ರಗಳ ರಿಲೀಸ್ ವೇಳೆ ಪ್ರಮೋಷನ್‌ಗಾಗಿ ಕಾಣಿಸಿಕೊಳ್ಳುತ್ತಾರೆಯೇ ಹೊರತು, ಟಿವಿ ಸ್ಕಿçÃನ್ ಎಂದರೆ ದರ್ಶನ್‌ಗೆ ಅಷ್ಟಕ್ಕಷ್ಟೇ. ಸ್ಟಾರ್‌ಗಳು ಟಿವಿಯಲ್ಲಿ ಕಾಣಿಸಿಕೊಂಡರೆ, ಅವರ ಸಿನಿಮಾಗಳ ಬಗ್ಗೆ ಕುತೂಹಲ ಕಡಿಮೆಯಾಗುತ್ತೆ ಎಂದು ವಾದ ಮಾಡುವವರು ದರ್ಶನ್ ಉದಾಹರಣೆ ಕೊಡ್ತಾರೆ. ಆದರೆ, ಈಗ ಸ್ಯಾಂಡಲ್‌ವುಡ್ ಸೆನ್ಸೇಷನ್ ಶುರುವಾಗಿದೆ. ದರ್ಶನ್ ಕಿರುತೆರೆಯೊಂದರ ಶೋ ನಿರೂಪಣೆಗೆ ಒಪ್ಪಿದ್ದಾರೆ.

ದರ್ಶನ್ ಒಪ್ಪಿಕೊಂಡಿರುವ ಶೋ ಯಾವುದು..? ಕಾನ್ಸೆಪ್ಟ್ ಏನು..? ಈ ಎಲ್ಲ ಪ್ರಶ್ನೆಗಳಿಗೆ ಚಾನೆಲ್ಲಿನವರು ಉತ್ತರ ಕೊಟ್ಟಿಲ್ಲ. ಹೀಗಾಗಿ ಚಾನೆಲ್ ಹೆಸರು ಹೇಳುವುದೂ ಕಷ್ಟ. ಆದರೆ, ಶೋಗೆ ಎಲ್ಲ ತಯಾರಿಗಳೂ ಆರಂಭವಾಗಿದೆ. ಇಡೀ ಕಾರ್ಯಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಫೈನಲ್ ಚರ್ಚೆ ನಡೆಯುತ್ತಿದೆ. ಜನವರಿ ಹೊತ್ತಿಗೆ ಚಿತ್ರೀಕರಣ ಶುರುವಾಗಬಹುದು.

ಕನ್ನಡದಲ್ಲಿ ಕಿರುತೆರೆಗೆ ನಿರೂಪಕರಾಗಿ ಪ್ರವೇಶಿಸಿದ ಮೊದಲ ಸ್ಟಾರ್ ನಟ ಸುದೀಪ್. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಮೂಲಕ ಕಿರುತೆರೆಗೆ ಬಂದ ಈಗ ಬಿಗ್‌ಬಾಸ್‌ನಲ್ಲಿದ್ದಾರೆ. ನಂತರ ಪುನೀತ್ ಕನ್ನಡದ ಕೋಟ್ಯಧಿಪತಿ ಶೋಗೆ ಬಂದರು. ನಂತರ  ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ಜಗ್ಗೇಶ್, ಯೋಗರಾಜ್ ಭಟ್, ವಿಜಯ್ ರಾಘವೇಂದ್ರ.. ಪಟ್ಟಿ ಬೆಳೆಯುತ್ತಲೇ ಇದೆ. ಈಗ ದರ್ಶನ್..

Matthe Udbhava Trailer Launch Gallery

Maya Bazaar Pressmeet Gallery