` ಒಡೆಯ ಟ್ರೇಲರ್ ಹಿಟ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
odeya traier is a mass hit
Odeya Movie Image

ದರ್ಶನ್ ಅಭಿನಯದ 4ನೇ ಸಿನಿಮಾ ಡಿಸೆಂಬರ್ 12ಕ್ಕೆ ರಿಲೀಸ್. ಹೌದು, ಇದು 4ನೇ ಸಿನಿಮಾ. ಕುರುಕ್ಷೇತ್ರ, ಯಜಮಾನ ಚಿತ್ರಗಳಲ್ಲಿ ದರ್ಶನ್ ಹೀರೋ ಆಗಿದ್ದರೆ, ಅಮರ್ ಚಿತ್ರದಲ್ಲಿ ಅತಿಥಿ ನಟರಾಗಿದ್ದರು. ಈಗ ಒಡೆಯನಾಗಿ ಬರುತ್ತಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಹಿಟ್ ಆಗಿದೆ.

ಒಡೆಯ ತಮಿಳಿನ ವೀರಂ ಚಿತ್ರದ ರೀಮೇಕ್. ತಮಿಳಿನಲ್ಲಿ ಅಜಿತ್, ತೆಲುಗಿನಲ್ಲಿ ಪವನ್ ಕಲ್ಯಾಣ್ (ಕಾಟಮರಾಯುಡು) ಮಾಡಿದ್ದ ಪಾತ್ರವನ್ನು ದರ್ಶನ್ ಇಲ್ಲಿ ಮಾಡಿದ್ದಾರೆ. ದರ್ಶನ್‌ಗೆ ಎದುರಾಗಿ ಸನಾ ತಿಮ್ಮಯ್ಯ ಎಂಬ ಕೊಡವರ ಚೆಲುವೆ ನಟಿಸಿದ್ದಾರೆ. ದೇವರಾಜ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾ ಶೆಣೈ ಮೊದಲಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಿರ್ಮಾಪಕರು. ಅರ್ಜುನ್ ಜನ್ಯ ಹಾಡು ನೀಡಿರುವ ಸಿನಿಮಾಗೆ, ಹರಿಕೃಷ್ಣ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.

India Vs England Pressmeet Gallery

Odeya Audio Launch Gallery