` ಹೌಸ್ ಫುಲ್ ಇದ್ದರೂ.. ಕನ್ನಡ ಮೇಷ್ಟುç ಎತ್ತಂಗಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kaalidasa kananda mestru shows helplessness
Kaalidasa Kannada Mestru Image

ಕಾಳಿದಾಸ ಕನ್ನಡ ಮೇಷ್ಟುç ರಿಲೀಸ್ ಆಗಿ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಸುಮ್ಮನೆ ಅಲ್ಲ.. ಪ್ರೇಕ್ಷಕರು, ಚಿತ್ರರಂಗದವರು ಮೆಚ್ಚಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ.. ಕರ್ನಾಟಕದಲ್ಲಿ ಕನ್ನಡಿಗರೇ ಪರದೇಶಿಗಳಾಗಿ ಕಾಳಿದಾಸ ಕನ್ನಡ ಮೇಷ್ಟುç ಎತ್ತಂಗಡಿಯಾಗಿದೆ. ಈ ವಾರ ಒಟ್ಟು 45 ಸಿನಿಮಾ ರಿಲೀಸ್ ಆಗಿದ್ದವು. ಅವುಗಳಲ್ಲಿ 32 ಪರಭಾಷಾ ಚಿತ್ರಗಳು. ಕಾಳಿದಾಸನನ್ನು ಎತ್ತಿ ಹೊರಗೆ ಹಾಕಿರುವುದು ಈ ಪರಭಾಷಾ ಚಿತ್ರಗಳಿಗಾಗಿ.

ಸಿನಿಮಾ ಚೆನ್ನಾಗಿಲ್ಲ, ಜನ ಬರ್ತಿಲ್ಲ ಎಂದರೆ ಕೇಳೋಕೆ ನಮಗೂ ಕಷ್ಟ. ಆದರೆ, ಜನ ಮೆಚ್ಚಿ, ಕಲೆಕ್ಷನ್ ಕೂಡಾ ಚೆನ್ನಾಗಿರುವಾಗ ಈ ರೀತಿ ಆದರೆ ಯಾರನ್ನು ಕೇಳೋಣ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಜಗ್ಗೇಶ್. ನಿರ್ದೇಶಕ ಕವಿರಾಜ್ ಅವರದ್ದೂ ಅದೇ ಮಾತು. ಯಾರನ್ನು ಕೇಳೋದು..?

ಅಂದಹಾಗೆ ಜಗ್ಗೇಶ್ ಹುಟ್ಟಾ ಹೋರಾಟಗಾರ. ಮಾಜಿ ಶಾಸಕ. ನಟ, ನಿರ್ಮಾಪಕರಷ್ಟೇ ಅಲ್ಲ, ರಾಜಕೀಯದಲ್ಲಿಯೂ ಪ್ರಭಾವಿ ನಾಯಕ. ಅವರೇ ಹೀಗೆ ಅಸಹಾಯಕರಾಗಿದ್ದಾರೆ ಎಂದರೆ..

ಅತ್ತ ನಿರ್ದೇಶಕ ಕವಿರಾಜ್ ಕೂಡಾ ಅಸಹಾಯಕತೆ ತೋಡಿಕೊಳ್ಳುವವರಲ್ಲ. ಕನ್ನಡದ ಹೋರಾಟಗಳಲ್ಲಿ ಏಕಾಂಗಿಯಾಗಿಯೇ ನುಗ್ಗಿದ್ದವರು. ಅವರೂ ಅಸಹಾಯಕರಾಗಿದ್ದಾರೆ ಎಂದರೆ..

India Vs England Pressmeet Gallery

Odeya Audio Launch Gallery