ರವಿಚಂದ್ರನ್ ಅವರ ೨ನೇ ಪುತ್ರ ವಿಕ್ರಮ್ ನಟಿಸುತ್ತಿರುವ ಮೊದಲ ಚಿತ್ರ ತ್ರಿವಿಕ್ರಮ. ಸಹನಾ ಮೂರ್ತಿ ನಿರ್ದೇಶನದ ಚಿತ್ರಕ್ಕೀಗ ಬಾಲಿವುಡ್‌ನ ರೋಹಿತ್ ರಾಯ್ ಎಂಟ್ರಿ ಕೊಟ್ಟಿದ್ದಾರೆ. ವಿಲನ್ ಆಗಿ.
ಶೂಟೌಟ್ ಅಟ್ ಲೋಖಂಡ್‌ವಾಲ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ರೋಹಿತ್, ಈಗ ಸಿಕ್ಕಾಪಟ್ಟೆ ಬ್ಯುಸಿ ವಿಲನ್. ಚಿತ್ರದಲ್ಲಿ ರೋಹಿತ್ ಅವರದ್ದ ಎಸಿಪಿ ಪಾತ್ರವಂತೆ. ಆದರೆ... ನೆಗೆಟಿವ್ ಶೇಡ್‌ನದ್ದು. ಪಾತ್ರಕ್ಕೆ ಇವರೇ ಸೂಕ್ತ ಎನ್ನಿಸಿ ಆಯ್ಕೆ ಮಾಡಿದೆವು ಎನ್ನುತ್ತಾರೆ ಸಹನಾ ಮೂರ್ತಿ.
ತ್ರಿವಿಕ್ರಮ್‌ಗೆ ಚಿತ್ರದಲ್ಲಿ ಆಕಾಂಕ್ಷಾ ನಾಯಕಿಯಾಗಿದ್ದು, ಅಕ್ಷರಾ ಗೌಡ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ತೆಲುಗು ನಟ ವಿಜಯ್ ಪ್ರಕಾಶ್, ಸಾಧುಕೋಕಿಲ, ಚಿಕ್ಕಣ್ಣ, ಶಿವಮಣಿ, ಸುಚೇಂದ್ರ ಪ್ರಸಾದ್ ಮೊದಲಾದವರು ನಟಿಸಿರುವ ಚಿತ್ರಕ್ಕೆ ಉದ್ಯಮಿ ಸೋಮಣ್ಣ ಮತ್ತು ಸುರೇಶ್ ನಿರ್ಮಾಪಕರು.