ಹದಿಹರೆಯದವರ ತಲ್ಲಣ ತವಕಗಳನ್ನು ಹೇಳುತ್ತಲೇ ದೊಡ್ಡವರ ಹೃದಯವನ್ನೂ ಮುಟ್ಟಿರುವ ಯೋಗರಾಜ್ ಭಟ್, ಈಗ ಪದವಿಪೂರ್ವ ಅನ್ನೋ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಗಾಳಿಪಟ 2 ನಿರ್ದೇಶನ, ಸೀರೆ ಚಿತ್ರದ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್, ಪದವಿಪೂರ್ವ ಅನ್ನೋ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕರು ಮಾತ್ರ, ನಿರ್ದೇಶಕರಲ್ಲ.
ಭಟ್ಟರ ಜೊತೆಯಲ್ಲೇ ಕೆಲಸ ಮಾಡಿ ಅನುಭವ ಇರುವ ಹರಿಪ್ರಸಾದ್ ಜಯಣ್ಣ, ಈ ಚಿತ್ರಕ್ಕೆ ನಿರ್ದೇಶಕ. ದಾವಣಗೆರೆಯ ಪೃಥ್ವಿ ಶಾಮನೂರು ನಾಯಕ. ಆತ ಹೊಸ ಪ್ರತಿಭೆ. ಭಟ್ಟರ ಜೊತೆ ಪೃಥ್ವಿಯವರ ತಂದೆ ರವಿ ಶಾಮನೂರು ಕೂಡಾ ನಿರ್ಮಾಣದಲ್ಲಿ ಭಟ್ಟರ ಜೊತೆ ಕೈಜೋಡಿಸಿದ್ದಾರೆ. 2020ರ ಆರಂಭದಲ್ಲಿ ಸಿನಿಮಾ ಸೆಟ್ಟೇರಲಿದ್ದು, ಪಿಯು ವಿದ್ಯಾರ್ಥಿಗಳ ಕಥೆಯನ್ನೇ ಚಿತ್ರದಲ್ಲಿ ಹೇಳಲು ಕಥೆ ಸಿದ್ಧ ಮಾಡಿದ್ದಾರೆ ಯೋಗರಾಜ್ ಭಟ್.