ದತ್ತಣ್ಣ ಬಾಲಿವುಡ್ ನಟಿ ಮಧುಬಾಲಾ ಅವರ ಕಟ್ಟರ್ ಫ್ಯಾನ್. ಕಟ್ಟರ್ ಅಂದ್ರೆ ಕಟ್ಟರ್ ಅಭಿಮಾನಿ. ಅವರ ಕಾಲದ ಅತಿಲೋಕ ಸುಂದರಿ ಮಧುಬಾಲಾ. ತನ್ನ ನಗುವಿನಿಂದಲೇ ನೋಡುಗರ ಹೃದಯದಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದ ಸರಳ ಸುಂದರಿ. ಈಗ ದತ್ತಣ್ಣ ಆ ಮಧುಬಾಲಾರನ್ನೇ ಬಿಟ್ಟು ರಾಧಿಕಾ ನಾರಾಯಣ್ ಅಭಿಮಾನಿಯಾಗಿಬಿಟ್ಟಿದ್ದಾರೆ. ಅದೆಲ್ಲದಕ್ಕೂ ಕಾರಣವಾಗಿರೋದು ಮುಂದಿನ ನಿಲ್ದಾಣ.
ಮುಂದಿನ ನಿಲ್ದಾಣದಲ್ಲಿ ರಾಧಿಕಾ ಮೀರಾ ಅನ್ನೋ ಮಾಡರ್ನ್ ಹುಡುಗಿಯ ಪಾತ್ರ ಮಾಡಿದ್ದಾರೆ. ಸೀರಿಯಸ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದ ರಾಧಿಕಾ, ಇಲ್ಲಿ ಬೆರಗು ಹುಟ್ಟಿಸುತ್ತಾರೆ. ಮತ್ತೆ ಮತ್ತೆ ನೋಡಬೇಕು.. ತಿರ್ ತಿರುಗಿ ನೋಡಬೇಕು ಎಂಬ ಆಸೆ ಹುಟ್ಟಿಸುತ್ತಾರೆ. ಹೀಗಾಗಿಯೇ ದತ್ತಣ್ಣ ಈಗ ರಾಧಿಕಾ ಫ್ಯಾನ್.
ಸುಮ್ನೆ ಒಂದ್ಸಲ ಟೀಂ ಜೊತೆ ಸಿನಿಮಾ ನೋಡೋಣ ಎಂದುಕೊAಡು ನೋಡಿದೆ. ನೋಡ್ತಾ ನೋಡ್ತಾ ನನ್ನ ಜೊತೆ ನಟಿಸಿದ್ದ ರಾಧಿಕಾ ಇವರೇನಾ ಎಂದು ಎನಿಸಿಬಿಟ್ಟಿತು. ಅಷ್ಟು ಚೆಂದವಾಗಿ ಕಾಣ್ತಾರೆ. ಅದ್ಭುತವಾಗಿ ನಟಿಸಿದ್ದಾರೆ ಎನ್ನುವ ದತ್ತಣ್ಣ, ನಾನೀಗ ಮಧುಬಾಲಾರನ್ನು ಬಿಟ್ಟು ರಾಧಿಕಾ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ. ವಿನಯ್ ಭಾರದ್ವಾಜ್ ನಿರ್ದೇಶನದ ಮುಂದಿನ ನಿಲ್ದಾಣ ಇದೇ ವಾರ ರಿಲೀಸ್ ಆಗುತ್ತಿದೆ.