` ಸ್ಯಾಂಡಲ್ವುಡ್ ಸೆನ್ಸೇಷನ್ : ಶಿವಣ್ಣ-ದರ್ಶನ್ ಒಟ್ಟಿಗೇ ಸಿನಿಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will shivanna and darshan act in a movie together
Shivarajkumar, Darshan

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೇ ಸಿನಿಮಾ ಮಾಡಿದ್ರೆ ಹೇಗಿರುತ್ತೆ..? ನಾವ್ ರೆಡಿ ಅಂದಿದ್ದಾರೆ ಶಿವಣ್ಣ  ಮತ್ತು ದರ್ಶನ್.

ಒಂದೊಳ್ಳೆ ಕಥೆ, ಒಳ್ಳೆಯ ಡೈರೆಕ್ಟರ್ ಸಿಕ್ಕರೆ ಸಿನಿಮಾ ಮಾಡೋಕೆ ನಾನು ರೆಡಿ. ಕಾಲ ಕೂಡಿ ಬರಬೇಕು ಎಂದಿದ್ದಾರೆ ಶಿವಣ್ಣ. ನಮ್ಮನ್ನ ಹ್ಯಾಂಡಲ್ ಮಾಡೋ ಡೈರೆಕ್ಟರ್ ಇಲ್ಲ. ಸಿಕ್ಕರೆ ನಾನೂ ರೆಡಿ ಅಂದಿದ್ದಾರೆ ದರ್ಶನ್.

ಇದೆಲ್ಲವೂ ನಡೆದಿದ್ದು ಪಾರ್ವತಮ್ಮನವರ ಸಹೋದರನ ಮಗ ಧ್ರುವನ್ ಚಿತ್ರದ ಮುಹೂರ್ತದಲ್ಲಿ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೇ ಬಂದರು. ಯುವ ತಾರೆಗಳಿಗೆ ಶುಭ ಹಾರೈಸಿದ್ರು. ಶಿವಣ್ಣ ಕ್ಲಾಪ್ ಮಾಡಿದ್ರೆ, ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು ದರ್ಶನ್.

ಕಾರ್ಯಕ್ರಮದ ನಡುವೆ ಪರಸ್ಪರ ಅಪ್ಪಿಕೊಂಡ ದರ್ಶನ್ ಮತ್ತು ಶಿವಣ್ಣ, ಕಾರ್ಯಕ್ರಮದುದ್ದಕ್ಕೂ ತರಲೆ, ತಮಾಷೆ ಮಾಡಿಕೊಂಡೇ ಇದ್ದರು. ಅಭಿಮಾನಿಗಳ ಪಾಲಿಗೆ ಇನ್ನೇನು ಬೇಕು..?

Mugilpete Shooting Pressmeet In Sakleshpura

Odeya Audio Launch Gallery