Print 
meghana gaonkar kaalidasa kannada mestru, iaggesh shivalingappa,

User Rating: 0 / 5

Star inactiveStar inactiveStar inactiveStar inactiveStar inactive
 
a complete comedy ride with  strong message is kaalidasa kananda mestru
Kaalidasa Kannada Mestru Movie Image

ಕಾಳಿದಾಸ ಕನ್ನಡ ಮೇಷ್ಟುç ಚಿತ್ರದ ವಿಷಯ ಬಂದಾಗಲೆಲ್ಲ ಇದು ಕನ್ನಡ ಭಾಷೆ, ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಸಿದ್ಧವಾಗಿರುವ ಚಿತ್ರ ಎಂಬ ಒಂದು ಮಾತು ಎಲ್ಲೆಡೆ ಕೇಳಿ ಬರುತ್ತೆ. ಹಾಗಾದರೆ, ಇಡೀ ಸಿನಿಮಾ ಸಂದೇಶವೇ ಇರುತ್ತಾ..? ಮೊದಲೇ ಎಜುಕೇಷನ್ ಸಿಸ್ಟಂ ವಿಷ್ಯ ಅಂತೀರಿ ಅಂದ್ರೆ.. ಹಾಗೇನಿಲ್ಲ. ಇಡೀ ಚಿತ್ರದ ಮೂಲ ದ್ರವ್ಯವೇ ಶಿಕ್ಷಣ ವ್ಯವಸ್ಥೆ, ಕನ್ನಡ ಇಂಗ್ಲಿಷ್ ಪೈಪೋಟಿಯಾಗಿದ್ದರೂ, ೯೦% ಕಾಮಿಡಿ ಚಿತ್ರದಲ್ಲಿದೆ.

ನಿರ್ದೇಶಕ ಕವಿರಾಜ್ ಹೆಜ್ಜೆ ಹೆಜ್ಜೆಯಲ್ಲೂ ಹಾಸ್ಯ ತುಂಬಿದ್ದಾರೆ. ಒಂದಕ್ಷರ ಇಂಗ್ಲಿಷ್ ಬಾರದ ಕನ್ನಡ ಮೇಷ್ಟಾçಗಿ ಜಗ್ಗೇಶ್, ಇಂಗ್ಲಿಷ್ ಪ್ರೇಮಿಯಾಗಿ, ಗ್ಲಾಮರಸ್ ಚೆಲುವೆಯಾಗಿ, ಬಜಾರಿಯಾಗಿ ಗಂಡನನ್ನು ಹದ್ದುಬಸ್ತಿನಲ್ಲಿಡುವ ಮೇಘನಾ ಗಾಂವ್ಕರ್.. ಅವರಿಬ್ಬರ ದೃಶ್ಯಗಳು ಕಚಗುಳಿಯಿಡುತ್ತಾ ಹೋಗುತ್ತವೆ.

ಅಂಬಿಕಾ, ನಾಗಾಭರಣ, ತಬಲಾ ನಾಣಿ, ಯತಿರಾಜ್, ಉಷಾ ಭಂಡಾರಿ, ಪಿ.ಡಿ.ಸತೀಶ್, ಬಾಲನಟರಾದ ಓಂ ಆರ್ಯ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಉದಯ್ ಕುಮಾರ್ ಚಿತ್ರದ ನಿರ್ಮಾಪಕರಾಗಿದ್ದು, ಈಗಾಗಲೇ ಗುರುಕಿರಣ್ ನಿರ್ದೇಶನದ ಹಾಡುಗಳು ಪ್ರೇಕ್ಷಕರ ಹೃದಯ ಮುಟ್ಟಿವೆ.