ಶಿವಣ್ಣ, ದ್ವಾರಕೀಶ್, ಪಿ.ವಾಸು, ರಚಿತಾ ರಾಮ್ ಕಾಂಬಿನೇಷನ್ನಿನ ಆಯುಷ್ಮಾನ್ ಭವ ಅರಬ್ ರಾಷ್ಟçಗಳಲ್ಲೂ ಸದ್ದು ಮಾಡ್ತಿದೆ. ದುಬೈ, ಅಬುದಾಭಿ, ಕತಾರ್‌ನಲ್ಲೂ ರಿಲೀಸ್ ಆಗಿರುವ ಆಯುಷ್ಮಾನ್ ಭವ, ಪ್ರೇಕ್ಷಕರ ಮನಸ್ಸು ಗೆದ್ದಿದೆ.
ಬುದ್ದಿಮಾಂದ್ಯ ಯುವತಿಯಾಗಿ ರಚಿತಾ ರಾಮ್, ಆಕೆಯನ್ನು ಸರಿಪಡಿಸುವ ಡಾಕ್ಟರ್ ಆಗಿ ಶಿವಣ್ಣ ಅಭಿನಯ ಈಗಾಗಲೇ ಮೋಡಿ ಮಾಡಿದೆ. ಅನಂತ್ ನಾಗ್, ಸುಹಾಸಿನಿ ಜೋಡಿ ಚಿತ್ರವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರೆ, ಗುರುಕಿರಣ್ ಸಂಗೀತ ಚಿತ್ರದ ಜೀವಾಳ. ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವೊಂದು ಮತ್ತೊಮ್ಮೆ ಯಶಸ್ಸಿನ ಹಾದಿಯಲ್ಲಿದೆ.